ಕಾರ್ಯಾಚರಣೆ ನಡೆಸಿದ  ಪರಪ್ಪನ ಅಗ್ರಹಾರ ಪೊಲೀಸರು ಹೈಟೆಕ್​ ವೇಶ್ಯಾವಾಟಿಕೆ ನಡೆಸುತ್ತಿದ್ದ ನಾಲ್ವರನ್ನು ಬಂಧಿಸಿದ್ದಾರೆ. ಅಲ್ಕಾಸಿಂಗ್​, ನಹೀಂ, ಹಮೀದಾ, ಮುಲ್ಲ ಬಂಧಿತರು ಎಂದು ಗುರುತಿಸಲಾಗಿದ್ದು, ಬಂಧಿತರ ವಿರುದ್ಧ ಪೊಲೀಸರು ಕೇಸ್​ ದಾಖಲಿಸಿಕೊಂಡಿದ್ದಾರೆ.

ಬೆಂಗಳೂರು(ಡಿ.17): ಹೈಟೆಕ್ ವೇಶ್ಯಾವಾಟಿಕೆಗೂ ನೋಟ್ ಬ್ಯಾನ್ ಬಿಸಿ ತಟ್ಟಿದೆ. ವೇಶ್ಯಾವಾಟಿಕೆ ನಡೆಸಲು ಗಿರಾಕಿಗಳ ಜೇಬಲ್ಲಿ ಹಣ ಇಲ್ಲದಿದ್ದಾಗ ಸ್ವೈಪಿಂಗ್​ ಮೆಷಿನ್​ ಬಳಸಿ ಪಶ್ಚಿಮಬಂಗಾಳದಿಂದ ಹುಡುಗಿಯರನ್ನು ಕರೆತಂದು ವೇಶ್ಯಾವಾಟಿಕೆ ನಡೆಸುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದೆ.