ಇನ್ನು ಫರೂಕ್ ಮೃತನ ದೇಹವನ್ನು ಭಾರತಕ್ಕೆ ಕಳುಹಿಸಿಕೊಡಲು ಆತನ ಕುಟುಂಬಸ್ಥರು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಗೆ ಟ್ವಿಟ್ ಮುಖಾಂತರ ಮನವಿ ಮಾಡಿದ್ದಾರೆ.
ಕೊಪ್ಪಳ (ಫೆ.19): ಸೂಡಾನ್ ದೇಶದಲ್ಲಿ ಉಗ್ರ ಗುಂಡೇಟಿಗೆ ಕೊಪ್ಪಳದ ಯುವಕನೊರ್ವ ಬಲಿಯಾಗಿರುವ ಘಟನೆ ನಡೆದಿದೆ. ಜಿಲ್ಲೆಯ ಗಂಗಾವತಿಯ 25 ವರ್ಷದ ಫರೂಕ್ ಎನ್ನುವ ಯುವಕ ಸೂಡಾನ್ನಲ್ಲಿ ಉಗ್ರರ ಗುಂಡೇಟಿಗೆ ಬಲಿಯಾಗಿದ್ದಾನೆ. ಇನ್ನು ಮೃತ ಫರೂಕ್ ಸೂಡಾನದ ಜ್ಯೂಬಾದ ಒಮಸ್ಕಿ ಎಂಬ ಕಂಪನಿಯಲ್ಲಿ ಸುಪರವೈಜರ್ ಆಗಿ ಕೆಲಸ ಮಾಡುತ್ತಿದ್ದ. ಇನ್ನು ಫರೂಕ್ ಮೃತನ ದೇಹವನ್ನು ಭಾರತಕ್ಕೆ ಕಳುಹಿಸಿಕೊಡಲು ಆತನ ಕುಟುಂಬಸ್ಥರು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಗೆ ಟ್ವಿಟ್ ಮುಖಾಂತರ ಮನವಿ ಮಾಡಿದ್ದಾರೆ. ಇದಕ್ಕೆ ಸ್ಪಂದಿಸಿರುವ ಸಚಿವೆ ಸುಷ್ಮಾ ಸ್ವರಾಜ್, ಮೃತ ದೇಹವನ್ನು ಭಾರತಕ್ಕೆ ಕರೆತರಲು ಸಹಾಯ ಮಾಡುವುದಾಗಿ ತಿಳಿಸಿದ್ದಾರೆ. ಸದ್ಯ ಫರೂಕ್ನ ಕುಟುಂಬಸ್ಥರು ಆಂಧ್ರಪ್ರದೆಶದ ಕರ್ನೂಲ್ನಲ್ಲಿದ್ದಾರೆ. ಇನ್ನು ಫರೂಕ್ನ ಮೃತದೇಹ ಮಂಗಳವಾರ ಭಾರತಕ್ಕೆ ಬರುವ ಸಾಧ್ಯತೆ ಇದೆ ಎನ್ನಲಾಗಿದೆ.
