ರಿಯಾಲಿಟಿ ಶೋ ಒಂದರಲ್ಲಿ ರಾಹುಲ್ ಮಹಾಜನ್ ಜೊತೆ ಇಂಟಿಮಸಿ ಸೀನ್ ಒಂದರಲ್ಲಿ ಕಾಣಿಸಿಕೊಂಡು ಹೆಡ್ ಲೈನ್ ಆಗಿದ್ದ ಪಾಯಲ್ ರೋಹ್ಟಗಿ ಇದೀಗ ಮತ್ತೊಮ್ಮೆ ಸದ್ದು ಮಾಡಿದ್ದಾರೆ. ಅವರ ಹಸ್ತಮೈಥುನ ಟ್ವೀಟ್ ಗೆ ಸ್ವರಾ ಭಾಸ್ಕರ್ ಕೂಲ್ ರಿಯಾಕ್ಷನ್ ನೀಡಿದ್ದಾರೆ. 

ಮುಂಬೈ : ರಿಯಾಲಿಟಿ ಶೋ ಒಂದರ ವೇಳೆ ರಾಹುಲ್ ಮಹಾಜನ್ ಜೊತೆ ಇಂಟಿಮಸಿ ಸೀನ್ ನಲ್ಲಿ ಕಾಣಿಸಿಕೊಂಡಿದ್ದ ಪಾಯಲ್ ರೋಹಟ್ಗಿ ಇದೀಗ ಮತ್ತೊಮ್ಮೆ ಸದ್ದು ಮಾಡಿದ್ದಾರೆ. 

ಕೆಲ ದಿನದ ಹಿಂದೆ ಕೇರಳ ಪ್ರವಾಹದ ಬಗ್ಗೆ ಟ್ವೀಟ್ ಮಾಡಿ ವಿವಾದಕ್ಕೆ ಸಿಲುಕಿದ್ದರು. ಕೇರಳದಲ್ಲಿ ಗೋ ಹತ್ಯೆ ಮಾಡುವುದರಿಂದಲೇ ಅಲ್ಲಿ ಪ್ರವಾಹ ಸಂಭವಿಸಿದೆ ಎಂದು ರಿಯಾಕ್ಟ್ ಮಾಡಿದ್ದರು. 

ಇದರಿಂದ ಅನೇಕರು ಆಕೆಗೆ ಮಾನಸಿಕ ಸ್ವಾಸ್ಥ್ಯ ಸರಿ ಇಲ್ಲವೆಂದು ಹೇಳಿದ್ದರು. ಅಲ್ಲದೇ ಆಕೆ ಓರ್ವ ಪ್ಲಾಪ್ ಆ್ಯಕ್ಟರ್ ಎಂದು ಕರೆದು, ಅದಕ್ಕಾಗಿಯೇ ಇಂತಹ ಹೇಳಿಕೆ ನೀಡಿ ಸುದ್ದಿಯಾಗುತ್ತಿದ್ದಾರೆ ಎಂದಿದ್ದರು. 

ಮುಂದಿನ ಫ್ಲಾಪ್ ಚಿತ್ರಕ್ಕೆ ಪ್ರಮೋಶನ್ ಮಾಡಲು ಇಂತಹ ಹೇಳಿಕೆ ನೀಡುತ್ತಿದ್ದಾರೆ ಎಂದಿದ್ದರು. 

ಅದಕ್ಕೆ ಪ್ರತಿಯಾಗಿ ಇದೀಗ ಟ್ವೀಟ್ ಮಾಡಿದ ಪಾಯಲ್ ಪ್ರಸಿದ್ಧಿಯಾಗಬೇಕು ಎಂದರೆ ಹಸ್ತಮೈಥುನ ಸೀನ್ ನಲ್ಲಿ ನಟಿಸಬೇಕು ಎಂದು ಹೇಳಿದ್ದು, ಪರೋಕ್ಷವಾಗಿ ಸ್ವರಾ ಭಾಸ್ಕರ್ ಹಾಗೂ ಸನ್ನಿ ಲಿಯೋನ್ ಬಗ್ಗೆ ಮಾತನಾಡಿದ್ದಾರೆ.

ಇದೀಗ ಈ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಸ್ವರಾ ಭಾಸ್ಕರ್ ನೀನು ಮಾನಸಿಕವಾಗಿ ಆರೋಗ್ಯವಾಗಿದ್ದೀಯೇ ಎಂದು ಅಂದುಕೊಂಡಿದ್ದೇನೆ. ಖುಷಿಯಿಂದ ಇರು ಎಂದು ತಿರುಗೇಟು ನೀಡಿದ್ದಾರೆ. 

Scroll to load tweet…
Scroll to load tweet…
Scroll to load tweet…