ಸಾಮಾನ್ಯವಾಗಿ ಸ್ವಾಮೀಜಿಗಳು ಅಧ್ಯಾತ್ಮಿಕ ಪಥದತ್ತ ಸಾಗುತ್ತಾರೆ. ಆದ್ರೆ ಈ ಸ್ವಾಮೀಜಿ ಮಾತ್ರ ಆಧ್ಯಾತ್ಮಿಕದ ಜೊತೆ ರಾಜಕೀಯಕ್ಕೆ ಎಂಟ್ರಿ ಕೊಡೋಕೆ ಮುಂದಾಗಿದ್ದಾರೆ. ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥರು ಪ್ರೇರಣೆಯಾಗಿ ತಾವೂ ಕೂಡ ಎಲೆಕ್ಷನ್ನಲ್ಲಿ ನಿಲ್ಲಬೇಕೆಂದು ನಿರ್ಧರಿಸಿ ಪ್ರಧಾನಿ ಮೋದಿಗೆ ರಾಮಾರೂಢ ಸ್ವಾಮೀಜಿ ಪತ್ರ ಬರೆದಿದ್ದಾರೆ.
ಬಾಗಲಕೋಟೆ: ಸಾಮಾನ್ಯವಾಗಿ ಸ್ವಾಮೀಜಿಗಳು ಅಧ್ಯಾತ್ಮಿಕ ಪಥದತ್ತ ಸಾಗುತ್ತಾರೆ. ಆದ್ರೆ ಈ ಸ್ವಾಮೀಜಿ ಮಾತ್ರ ಆಧ್ಯಾತ್ಮಿಕದ ಜೊತೆ ರಾಜಕೀಯಕ್ಕೆ ಎಂಟ್ರಿ ಕೊಡೋಕೆ ಮುಂದಾಗಿದ್ದಾರೆ. ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥರು ಪ್ರೇರಣೆಯಾಗಿ ತಾವೂ ಕೂಡ ಎಲೆಕ್ಷನ್ನಲ್ಲಿ ನಿಲ್ಲಬೇಕೆಂದು ನಿರ್ಧರಿಸಿ ಪ್ರಧಾನಿ ಮೋದಿಗೆ ರಾಮಾರೂಢ ಸ್ವಾಮೀಜಿ ಪತ್ರ ಬರೆದಿದ್ದಾರೆ.
ಬಾಗಲಕೋಟೆಯಲ್ಲಿರುವ ಬ್ರಹ್ಮವಿದ್ಯಾಶ್ರಮ ಮಠದ ಶ್ರೀಗಳು ರಾಜಕೀಯಕ್ಕೆ ಎಂಟ್ರಿ ಕೋಡೋಕೆ ಮುಂದಾಗಿದ್ದಾರೆ. ಅಲ್ಲದೆ ಭಕ್ತವೃಂದವೂ ಕೂಡ ರಾಜಕೀಯ ಪ್ರವೇಶಿಸುವಂತೆ ಒತ್ತಾಯಿಸಿದೆ. ಬಾಗಲಕೋಟೆ ಜಿಲ್ಲೆಯ ಬೀಳಗಿ ಮತಕ್ಷೇತ್ರದಿಂದ ಬಿಜೆಪಿಯಿಂದ ಸ್ಪರ್ಧಿಸಲು ನಿರ್ಧರಿಸಿದ್ದಾರೆ.
ಈ ಮಧ್ಯೆ ಬೀಳಗಿ ಮತಕ್ಷೇತ್ರವು ಯಡಿಯೂರಪ್ಪನವರ ಆಪ್ತ ಮಾಜಿ ಸಚಿವ ಮುರುಗೇಶ್ ನಿರಾಣಿಯವರ ಕ್ಷೇತ್ರವಾಗಿದ್ದು, ಬಿಜೆಪಿ ನಿರ್ಧಾರ ನೋಡಿ ಒಂದೊಮ್ಮೆ ಟಿಕೆಟ್ ಕೊಡದೇ ಹೋದಲ್ಲಿ ಪಕ್ಷೇತರರಾಗಿಯೇ ಸ್ಪರ್ಧೆ ಮಾಡಲು ಶ್ರೀಗಳು ಮುಂದಾಗಿದ್ದು, ಇದಕ್ಕೆ ಮಠದ ಭಕ್ತರು ಶ್ರೀಗಳಿಗೆ ಬೆಂಬಲ ನೀಡಿದ್ದಾರೆ.
