ಹುಬ್ಬಳ್ಳಿಯಲ್ಲಿ ಕಳೆದ ವಾರ ನಡೆದ ಲಿಂಗಾಯತ ಸಮಾವೇಶದಲ್ಲಿ ವಿವಾದಿತ ಹೇಳಿಕೆ ನೀಡಿದ್ದ ಕೂಡಲಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಶ್ರೀಗಳು ಈಗ ಹೊಸದೊಂದು ವಿವಾದದಲ್ಲಿ ಸಿಲುಕಿದ್ದಾರೆ.
ಬಾಗಲಕೋಟೆ: ಹುಬ್ಬಳ್ಳಿಯಲ್ಲಿ ಕಳೆದ ವಾರ ನಡೆದ ಲಿಂಗಾಯತ ಸಮಾವೇಶದಲ್ಲಿ ವಿವಾದಿತ ಹೇಳಿಕೆ ನೀಡಿದ್ದ ಕೂಡಲಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಶ್ರೀಗಳು ಈಗ ಹೊಸದೊಂದು ವಿವಾದದಲ್ಲಿ ಸಿಲುಕಿದ್ದಾರೆ.
‘ಲಿಂಗಾಯತರು ಮೂತ್ರ ಮಾಡಿದರೆ ವೀರಶೈವರು ಕೊಚ್ಚಿ ಹೋಗುತ್ತಾರೆ’ ಎಂದು ಶ್ರೀಗಳು ಆಡಿದ್ದಾರೆನ್ನಲಾದ ಮಾತುಗಳು ಈಗ ವೈರಲ್ ಆಗಿವೆ. ಆದರೆ ಆ ಧ್ವನಿ ತಮ್ಮದಲ್ಲ. ಆ ಆಡಿಯೋಗೂ ತಮಗೂ ಸಂಬಂಧವಿಲ್ಲ ಎಂದು ಶ್ರೀಗಳು ಸ್ಪಷ್ಟನೆ ನೀಡಿದ್ದಾರೆ.
ಎರಡು ವರ್ಷಗಳ ಹಿಂದೆ ಮಹದಾಯಿ ಹೋರಾಟದ ಸಂದರ್ಭದಲ್ಲಿ ನರಗುಂದದ ಸೊಬರದ ಮಠ ಶ್ರೀಗಳು ‘ಕೂಡಲಸಂಗಮ ಶ್ರೀಗಳು ಜಾತಿ ರಾಜಕಾರಣ ಮಾಡುತ್ತಿದ್ದಾರೆ’ ಎಂದು ಆರೋಪಿಸಿದ್ದರು. ಈ ಬಗ್ಗೆ ಕೊಪ್ಪಳದ ಭಕ್ತರೊಬ್ಬರೊಂದಿಗೆ ಕೂಡಲಸಂಗಮ ಶ್ರೀಗಳು ಮೊಬೈಲ್‌ನಲ್ಲಿ ಮಾತನಾಡಿದ್ದಾರೆನ್ನಲಾದ ಆಡಿಯೋದಲ್ಲಿ ‘ಬಹುಸಂಖ್ಯಾತರಾದ ನಾವೆಲ್ಲ ಮೂತ್ರ ಮಾಡಿದರೆ ಅವರೆಲ್ಲ ಕೊಚ್ಚಿ ಹೋಗುತ್ತಾರೆ. ಅವರಿಗೆ ನಾವು ಹೆದರಬೇಕಾಗಿಲ್ಲ’ ಎನ್ನುವ ಸಂಭಾಷಣೆ ಇತ್ತು. ಈ ಆಡಿಯೋ ವೈರಲ್ ಆಗಿತ್ತು.
ಈ ಆರೋಪವನ್ನು ಅಂದೇ ಶ್ರೀಗಳು ಅಲ್ಲಗಳೆದಿದ್ದರು. ಆದರೆ ನ.5ರ ಲಿಂಗಾಯತ ಸಮಾವೇಶದ ಬಳಿಕ ಮತ್ತೆ ಆಡಿಯೋ ವೈರಲ್ ಆಗಿದೆ. ಈ ಬಗ್ಗೆ ದೂರು ದಾಖಲಿಸಲಾಗುವುದು ಎಂದು ಶ್ರೀಗಳು ತಿಳಿಸಿದ್ದಾರೆ.
