ದೇಶವನ್ನು ಸ್ವಚ್ಛಗೊಳಿಸುವ ಕಾರ್ಯಕ್ಕೆ ಈಗಾಗಲೇ ಕೈ ಹಾಕಿರುವ ಪ್ರದಾನಿ ನರೇಂದ್ರ ಮೋದಿ, ಮತ್ತೊಂದು ಹೆಜ್ಜೆ ಮುಂದಿಟ್ಟು, ಸ್ವಚ್ಛತಾ ಹಿ ಸೇವಾ ಎಂಬ ಅಭಿಯಾನಕ್ಕೆ ಸೆ.15, 2018ರಂದು ಚಾಲನೆ ನೀಡಿದ್ದಾರೆ.
ನವದೆಹಲಿ: ಸ್ವಚ್ಛ ಭಾರತದ ಕನಸನ್ನು ನನಸು ಮಾಡುವ ನಿಟ್ಟಿನಲ್ಲಿ ಮತ್ತೊಂದು ಹೆಜ್ಜೆ ಮುಂದಿಟ್ಟಿರುವ ಪ್ರಧಾನಿ ನರೇಂದ್ರ ಮೋದಿ, ಶನಿವಾರ (ಸೆ.15) ‘ಸ್ವಚ್ಛತೆಯೇ ಸೇವೆ’ಎಂಬ ಆಂದೋಲನಕ್ಕೆ ಚಾಲನೆ ನೀಡಿದ್ದಾರೆ.
ಸ್ವಚ್ಛ ಭಾರತ ಅಭಿಯಾನದ ಮುಂದುವರೆದ ಭಾಗವಾಗಿರುವ ಈ ಆಂದೋಲನದ ಮೂಲಕ ಮಹಾತ್ಮಾ ಗಾಂಧೀಜಿಯವರ 150ನೇ ಜನ್ಮದಿನಾಚರಣೆ ನಡೆಯಲಿರುವ 2019ರ ಅ.2ರೊಳಗೆ ಹೊಸ ಸ್ವಚ್ಛ ಭಾರತದ ಕನಸು ನನಸಾಗಿಸುವ ಗುರಿಯನ್ನು ಪ್ರಧಾನಿ ರೂಪಿಸಿದ್ದಾರೆ.
ಈಗಾಗಲೇ ತಾವು ಆರಂಭಿಸಿದ್ದ ಸ್ವಚ್ಛ ಭಾರತ ಅಭಿಯಾನದ ರಾಯಭಾರಿಗಳಾಗಿದ್ದ ಹಲವರ ಜೊತೆ ಪ್ರಧಾನಿ ನರೇಂದ್ರ ಮೋದಿ ಸಂವಾದ ನಡೆಸುತ್ತಿದ್ದಾರೆ. ಈ ಆಂದೋಲನದ ಭಾಗವಾಗಿ ಪ್ರಧಾನಿ ಮೋದಿ ಈಗಾಗಲೇ ವಿವಿಧ ಸಿಎಂ, ಡಿಸಿಎಂ, ಚಲನಚಿತ್ರರಂಗ, ಕಲಾವಿದರು, ನಿವೃತ್ತ ಜಡ್ಜ್‌ಗಳು, ಕ್ರೀಡಾಪಟುಗಳು ಸೇರಿದಂತೆ 2000ಕ್ಕೂ ಹೆಚ್ಚು ಜನರಿಗೆ ಪತ್ರ ಬರೆದಿದ್ದು, ಆಂದೋಲನದ ಭಾಗವಾಗುವಂತೆ ಮನವಿ ಮಾಡಿದ್ದಾರೆ. ಈ ಮೂಲಕ ಇತರರಿಗೂ ಮಾದರಿಯಾಗುವಂತೆ ಕೋರಿದ್ದಾರೆ.
/p>
ಯೋಜನೆ ಗುರಿಗಳು
- ಗ್ರಾಮೀಣ ಭಾರತವನ್ನು 2019ರ ಅ.2ರ ಒಳಗಾಗಿ ಸ್ವಚ್ಛ, ಬಯಲು ಶೌಚ ಮುಕ್ತಗೊಳಿಸುವುದು.
- ಸ್ವಚ್ಛತೆ, ನೈರ್ಮಲ್ಯದ ಮೂಲಕ ಗ್ರಾಮೀಣ ಪ್ರದೇಶಗಲ್ಲಿ ಸಾಮಾನ್ಯ ಜೀವನ ಮಟ್ಟ ಸುಧಾರಣೆ
- ಸುಸ್ಥಿರ ನೈರ್ಮಲ್ಯ ವ್ಯವಸ್ಥೆ ಅಳವಡಿಕೆಗೆ ಸಮುದಾಯಗಳಿಗೆ ಉತ್ತೇಜನ
- ಪರಿಸರ ಸ್ನೇಹಿ, ಸುಸ್ಥಿರ ನೈರ್ಮಲ್ಯಕ್ಕಾಗಿ ಕಡಿಮೆ ವೆಚ್ಚದ ತಂತ್ರಜ್ಞಾನ
- ವೈಜ್ಞಾನಿಕವಾಗಿ ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣೆ
- ಸಮಾಜದ ಕೆಳ ಸ್ಥರಗಳಲ್ಲಿ ನೈರ್ಮಲ್ಯದ ಮೂಲಕ ಸಾಮಾಜಿಕ ಒಳಗೊಳ್ಳುವಿಕೆ ಉತ್ತೇಜನ
