ಎಸ್ಪಿ ಚೇಂಬರ್'ನಿಂದ ಕಣ್ಮರೆಯಾದ ಜೋಡಿ ಆನೆದಂತಗಳು ಅಸಲಿನಾ? ನಕಲಿನಾ? ಇದರ ಅಸಲಿಯತ್ತೇನು?. 37 ವರ್ಷಗಳ ಹಿಂದೆ ಶಿವಮೊಗ್ಗ ಎಸ್ಪಿ ಕಚೇರಿ ಸೇರಿದ್ದ ಸ್ವಾತಂತ್ರಪೂರ್ವ ಇತಿಹಾಸದ ಆನೆದಂತಗಳ ನಿಗೂಢತೆ ಬಯಲು ಮಾಡುತ್ತಿದೆ ಸುವರ್ಣನ್ಯೂಸ್.
ಶಿವಮೊಗ್ಗ (ಡಿ.25): ಎಸ್ಪಿ ಚೇಂಬರ್'ನಿಂದ ಕಣ್ಮರೆಯಾದ ಜೋಡಿ ಆನೆದಂತಗಳು ಅಸಲಿನಾ? ನಕಲಿನಾ? ಇದರ ಅಸಲಿಯತ್ತೇನು?. 37 ವರ್ಷಗಳ ಹಿಂದೆ ಶಿವಮೊಗ್ಗ ಎಸ್ಪಿ ಕಚೇರಿ ಸೇರಿದ್ದ ಸ್ವಾತಂತ್ರಪೂರ್ವ ಇತಿಹಾಸದ ಆನೆದಂತಗಳ ನಿಗೂಢತೆ ಬಯಲು ಮಾಡುತ್ತಿದೆ ಸುವರ್ಣನ್ಯೂಸ್.
ಶಿವಮೊಗ್ಗದ ಎಸ್ಪಿ ಚೇಂಬರ್ ನಲ್ಲಿದ್ದ ಬೆಲೆಬಾಳುವ ಜೋಡಿ ಆನೆದಂತಗಳ ನಿಗೂಢ ಕಣ್ಮರೆ ಬಗ್ಗೆ ಸುವರ್ಣನ್ಯೂಸ್ ಸುದ್ದಿ ಪ್ರಸಾರ ಮಾಡಿತ್ತು. ಇದರ ಬೆನ್ನಲ್ಲೆ ಎಚ್ಚೆತ್ತ ಗೃಹ ಇಲಾಖೆ ಎಡಿಜಿ ಕಮಲ್ ಪಂತ್ ಭೇಟಿ ನೀಡಿ ಉನ್ನತ ಮಟ್ಟದ ತನಿಖೆಯ ಮಾತನಾಡಿದ್ದರು. ಇಷ್ಟಾಗುತ್ತಿದ್ದಂತೆ ಎಸ್ಪಿ ಕಚೇರಿಯಲ್ಲಿದ್ದದ್ದು ನಕಲಿ ಅನೆದಂತೆ ಅದೊಂದು ಅಲಂಕಾರಿಕ ವಸ್ತುವಷ್ಟೇ ,ಅಸಲಿ ಅಲ್ಲವೆಂದು ಇಡಿ ಪ್ರಕರಣವನ್ನು ಮುಚ್ಚಿ ಹಾಕಲು ಹುನ್ನಾರ ನಡೆದಿತ್ತು.
ಹೇಗೆ ದಂತಗಳು ನಿಗೂಢವಾಗಿ ಕಣ್ಮರೆಯಾಗಿದ್ದವೋ? ಅದಕ್ಕಿಂತಲೂ ಅವು ಎಸ್ಪಿ ಕಚೇರಿಗೆ ಸೇರಿದ್ದು ಹೇಗೆಂಬದು ಕೂಡ ನಿಗೂಢವಾಗಿತ್ತು. ಈ ಚಿದಂಬರ ರಹಸ್ಯದ ಬೆಂಬತ್ತಿದ ಸುವರ್ಣನ್ಯೂಸ್ ಎಸ್ಪಿ ಕಚೇರಿಯನ್ನು ಆನೆದಂತ ಸೇರಿದ್ದು ಹೇಗೆಂಬ ಬಗ್ಗೆ 85 ವರ್ಷದ ಜೀವಂತ ಸಾಕ್ಷಿಯನ್ನು ಹುಡುಕಿ ತಂದಿದೆ.
1979 ರಿಂದ 1981 ರ ಅವಧಿಯಲ್ಲಿ ಶಿವಮೊಗ್ಗದ ಡಿಎಫ್ಓ ಆಗಿದ್ದ ಐಎಫ್ಎಸ್ ಅಧಿಕಾರಿ ಸಿ.ಹೆಚ್. ಬಸಪ್ಪನವರ್ 1979 ರಲ್ಲಿ ಅಂದಿನ ಎಸ್ಪಿ ಡಿ.ಎನ್.ನಾಗರಾಜ್ ಕೋರಿಕೆಯಂತೆ 1 ದಿನದ ಸಮ್ಮೇಳನಕ್ಕಾಗಿ ಜೋಡಿ ಆನೆದಂತಗಳನ್ನು ನಾನೇ ನೀಡಿದ್ದೆ ಎಂದು ಹೇಳಿದ್ದಾರೆ.
ಈ ದಂತಗಳನ್ನೇ ನೂತನ ಎಸ್ಪಿ ಕಚೇರಿಯ ಉದ್ಘಾಟನಾ ಕಾರ್ಯಕ್ರಮಕ್ಕಾಗಿ ನೀಡಿದ್ದನ್ನು ಹಿಂತಿರುಗಿಸದೇ ಎಸ್ಪಿ ಸಾಹೇಬರು ತಮ್ಮ ಕೊಠಡಿಯಲ್ಲಿಯೇ ಕಾನೂನುಬಾಹಿರವಾಗಿ ಇಟ್ಟು ಕೊಂಡಿದ್ದರೆಂದು ಬಸಪ್ಪನವರ್ ರಹಸ್ಯ ಸ್ಪೋಟಿಸಿದ್ದಾರೆ.
ಈ ದಂತ ಕಣ್ಮರೆ ಪ್ರಕರಣದಲ್ಲಿ IPS ಅಧಿಕಾರಿಗಳು ಶಾಮೀಲಾದ್ದರಿಂದ ಅರಣ್ಯ ಇಲಾಖೆಯ IFS ಅಧಿಕಾರಿಗಳು ಪ್ರಕರಣದಲ್ಲಿ ಮುಂದುವರೆಯಲು ಅಗತ್ಯ ದಾಖಲೆಗಳನ್ನು ನೀಡಲು ಹಿಂದೇಟು ಹಾಕುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಅನೆದಂತಗಳ ಕುರಿತು ಸಿ.ಹೆಚ್.ಬಸಪ್ಪನವರ್ ಹೇಳಿಕೆ ನೀಡಿರುವುದು ಮುಚ್ಚಿ ಹಾಕಲಿದ್ದ ಪ್ರಕರಣದ ಟ್ವಿಸ್ಟ್ ನೀಡಿದೆ.
