ಜಿಲ್ಲಾಧಿಕಾರಿಗಳು ಮತ್ತು ಜಿ.ಪಂ ಸಿಇಓಗಳ ಜೊತೆ ಸಿಎಂ ವಿಡಿಯೋ ಕಾನ್ಫರೆನ್ಸ್​ ನಡೆಸಿದ್ದು  ಈ ವಿಡಿಯೋ ಕಾನ್ಫರೆನ್ಸ್​​​​​​​​​ನಲ್ಲಿ ಸುವರ್ಣ ನ್ಯೂಸ್​ ನ ಗೋವು-ನೋವು, ನೀರು ಕಣ್ಣೀರು ವರದಿ ಪ್ರತಿದ್ವನಿಸಿದೆ.

ಬೆಂಗಳೂರು (ಏ.18): ಜಿಲ್ಲಾಧಿಕಾರಿಗಳು ಮತ್ತು ಜಿ.ಪಂ ಸಿಇಓಗಳ ಜೊತೆ ಸಿಎಂ ವಿಡಿಯೋ ಕಾನ್ಫರೆನ್ಸ್​ ನಡೆಸಿದ್ದು ಈ ವಿಡಿಯೋ ಕಾನ್ಫರೆನ್ಸ್​​​​​​​​​ನಲ್ಲಿ ಸುವರ್ಣ ನ್ಯೂಸ್​ ನ ಗೋವು-ನೋವು, ನೀರು ಕಣ್ಣೀರು ವರದಿ ಪ್ರತಿದ್ವನಿಸಿದೆ.

ಸುವರ್ಣ ನ್ಯೂಸ್ ವರದಿ ಬಳಿಕ ಎಚ್ಚೆತ್ತ ಸಿಎಂ ಕುಡಿಯುವ ನೀರು, ಜಾನುವಾರುಗಳ ಮೇವಿಗೆ ತೊಂದರೆಯಾದಂತೆ ನೋಡಿಕೊಳ್ಳಿ ಎಂದು ಸಭೆಯಲ್ಲಿ ಜಿಲ್ಲಾಧಿಕಾರಿಗಳು, ಜಿ.ಪಂ ಸಿಇಓಗಳಿಗೆ ಸೂಚನೆ ನೀಡಿದ್ದಾರೆ.

ನೀರು ಪೂರೈಕೆ ಮತ್ತು ಜಾನುವಾರುಗಳಿಗೆ ಮೇವು ಒದಗಿಸುವುದು ನಿಮ್ಮ ಜವಾಬ್ದಾರಿ. ಚಾಮರಾಜನಗರ ಪ್ರವಾಸದ ವೇಳೆ ಕುಡಿಯುವ ನೀರಿನ ತೊಂದರೆ ನೋಡಿದ್ದೇನೆ. ಕುಡಿಯುವ ನೀರು ಪೂರೈಸಲು ಖಾಸಗಿ ಕೊಳವೆ ಬಾವಿಗಳನ್ನು ವಶಕ್ಕೆ ತೆಗೆದುಕೊಂಡು ತಕ್ಷಣ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಗಳು, ಜಿ. ಪಂ. ಸಿಇಒಗಳಿಗೆ ಸಿಎಂ ಸೂಚಿಸಿದ್ದಾರೆ.