ಕೆಳಗಿನ ವಿಡಿಯೋದಲ್ಲಿರುವುದು  ಪರಪ್ಪನ ಅಗ್ರಹಾರದ ಸೆಂಟ್ರಲ್ ಜೈಲು. ಬೆಂಗಳೂರಿನ ಹೊರಭಾಗದಲ್ಲಿರೋ ಈ ಜೈಲಿನಲ್ಲಿ ಸುಮಾರು 4 ಸಾವಿರ ಖೈದಿಗಳಿದ್ದಾರೆ. ಶಶಿಕಲಾರಂತ ಪೊಲಿಟಿಕಲ್ ಖೈದಿಯಿಂದ ಹಿಡಿದು, ಪಿಕ್​ಪಾಕೆಟರ್​, ಕೊಲೆಗಡುಕರು, ದರೋಡೆಕೋರರು, ಅತ್ಯಾಚಾರಿಗಳು ಎಲ್ಲರೂ ಇರೋದು ಈ ಜೈಲಿನಲ್ಲೇ.

ಸೆಂಟ್ರಲ್ ಜೈಲ್​ನಲ್ಲಿ ಏನೇನೆಲ್ಲ ಅಕ್ರಮ ನಡೆಯುತ್ತೆ ಅನ್ನೋದ್ರ ಬಗ್ಗೆ ಡಿಐಜಿ ರೂಪಾ ಪತ್ರ ಬರೆದು, ಅದೀಗ ರಾಷ್ಟ್ರಮಟ್ಟದ ಸುದ್ದಿಯಾಗಿದೆ. ನಿಜಕ್ಕೂ ಅಲ್ಲಿ ರೂಪಾ ಹೇಳಿದ ರೀತಿಯಲ್ಲಿ ದಂಧೆ ನಡೀತಾ ಇದ್ಯಾ..? ಅದನ್ನ ಪತ್ತೆ ಹಚ್ಚೋಕೆ ಮುಂದಾದ ಸುವರ್ಣ ನ್ಯೂಸ್​ಗೆ ಬೆಚ್ಚಿ ಬೀಳುವಂತಹ ಸಾಕ್ಷಿ ಸಿಗ್ತಾ ಹೋದ್ವು. ಪರಪ್ಪನ ಅಗ್ರಹಾರದ ಸೆಂಟ್ರಲ್ ಜೈಲ್ ಅನ್ನೋದು ಈಗ ಅಕ್ಷರಶಃ ಗಾಂಜಾ ಬಜಾರ್ ಆಗಿ ಹೋಗಿದೆ. ಸುವರ್ಣ ನ್ಯೂಸ್ ರಹಸ್ಯ ಕಾರ್ಯಾಚರಣೆಯಲ್ಲಿ ಬಯಲಾದ ಸತ್ಯಗಳೇನು..? ಇಲ್ಲಿದೆ ಡೀಟೈಲ್ಸ್.

ಕೆಳಗಿನ ವಿಡಿಯೋದಲ್ಲಿರುವುದು ಪರಪ್ಪನ ಅಗ್ರಹಾರದ ಸೆಂಟ್ರಲ್ ಜೈಲು. ಬೆಂಗಳೂರಿನ ಹೊರಭಾಗದಲ್ಲಿರೋ ಈ ಜೈಲಿನಲ್ಲಿ ಸುಮಾರು 4 ಸಾವಿರ ಖೈದಿಗಳಿದ್ದಾರೆ. ಶಶಿಕಲಾರಂತ ಪೊಲಿಟಿಕಲ್ ಖೈದಿಯಿಂದ ಹಿಡಿದು, ಪಿಕ್​ಪಾಕೆಟರ್​, ಕೊಲೆಗಡುಕರು, ದರೋಡೆಕೋರರು, ಅತ್ಯಾಚಾರಿಗಳು ಎಲ್ಲರೂ ಇರೋದು ಈ ಜೈಲಿನಲ್ಲೇ.

ಜೈಲಿನ ಒಂದೇ ಒಂದು ನಿಯಮವೂ ಇಲ್ಲಿ ಪಾಲನೆಯಾಗಲ್ಲ..!

ಅದಕ್ಕೆ ಈ ದೃಶ್ಯಗಳೇ ಸಾಕ್ಷಿ. ನೀವೀಗ ನೋಡ್ತಾ ಇರೋದು ಸಂಜೆ ಮತ್ತು ರಾತ್ರಿಯ ದೃಶ್ಯಗಳು. ನಿಮಗೆ ಗೊತ್ತಿರಲಿ, ರಾತ್ರಿ 7 ಗಂಟೆಯ ನಂತರ, ಒಬ್ಬನೇ ಒಬ್ಬ ಖೈದಿಯೂ ಹೊರಗೆ ಬರೋ ಹಾಗಿಲ್ಲ. ಎಲ್ಲರೂ ಅವರವರ ಸೆಲ್​ನಲ್ಲಿರಬೇಕು. ಆದರೆ, ಇಲ್ಲಿ ಅದ್ಯಾವುದೂ ಪಾಲನೆಯಾಗಲ್ಲ. ಪರಪ್ಪನ ಅಗ್ರಹಾರ ಜೈಲು ಕೂಡಾ ಎಂಜಿ ರೋಡ್​ನಂತೆ, ಗಾಂಜಾ, ಹುಕ್ಕಾ ಬಾರುಗಳಂತೆ, ಪಬ್ಬುಗಳಂತೆ ಬದಲಾಗಿ ಹೋಗುತ್ತೆ. ಪೊಲೀಸರ ಕಣ್ಣೆದುರಿನಲ್ಲೇ..

ಇಷ್ಟೇ ಪರಪ್ಪನ ಅಗ್ರಹಾರದ ಕಾನೂನು. ಡಿಐಜಿ ರೂಪಾ ಹೇಳ್ತಿರೋದು ಇದನ್ನೇ. ಡಿಜಿಪಿ ಸತ್ಯನಾರಾಯಣ ರಾವ್ ಹಂಗೆಲ್ಲ ಇಲ್ಲ. ಎಲ್ಲವೂ ಸರಿಯಾಗಿದೆ ಅಂತಾ ಹೇಳ್ತಿರೋದು ಇದೇ ಜೈಲಿನ ಬಗ್ಗೆ.ಈಗ ಎಲ್ಲ ಬಯಲಾಗಿದೆ.