ಅಪ್ಪ ಅಮ್ಮ ಬೈದರು ಎಂದು ಬೇಸರಿಕೊಂಡು ಮನೆ ಬಿಟ್ಟಿದ್ದ ಮಣಿಕಂಠ ಅಭಿಮಾನಿ ಅಂತಾ ಗೊತ್ತಾಗಿ ಖುದ್ದು ಕಿಚ್ಚ ಸುದೀಪ್ ಅವರಿಂದ ಮನವಿ ಸೆಲ್ಫಿ ಬೈಟ್ ರೆಕಾರ್ಡ್ ಮಾಡಿ ಫೇಸ್ ಬುಕ್ ಮೂಲಕ ಸುದೀಪ್ ಮರಳಿ ಬಾ ಅಂದಿದ್ದರು ಮೇ 28ರ ರಾತ್ರಿ 9 ಗಂಟೆಗೆ ಸುದ್ದಿ ಪ್ರಸಾರ ಮಾಡಿದ್ದ ಸುವರ್ಣ ನ್ಯೂಸ್
ಬೆಂಗಳೂರು[ಜೂ.19]: ಪೋಷಕರು ಬೈದರೆಂದು ಮನೆ ಬಿಟ್ಟು ತಪ್ಪಿಸಿಕೊಂಡಿದ್ದ ಬಾಲಕನೊಬ್ಬ ಕನ್ನಡದ ಖ್ಯಾತ ನಟ ಕಿಚ್ಚ ಸುದೀಪ್ ಮನವಿ ಮೇರೆಗೆ ಮನೆಗೆ ಮರಳಿದ್ದಾನೆ.
ಶ್ರೀನಗರದ ರಮೇಶ್ ಮತ್ತು ರೂಪಾ ದಂಪತಿ ಪುತ್ರ ಮಣಿಕಂಠ ತಪ್ಪಿಸಿಕೊಂಡಿದ್ದ ಬಾಲಕ. ಮೇ 28ರಂದು ರಾತ್ರಿ 9 ಗಂಟೆಗೆ ಕಿಚ್ಚ ಸುದೀಪ್ ಮನವಿ ಮಾಡಿದ್ದ ಸುದ್ದಿಯನ್ನು ಸುವರ್ಣ ನ್ಯೂಸ್ ವರದಿ ಪ್ರಸಾರ ಮಾಡಿತ್ತು. ಅಭಿಮಾನಿ ಎಂದು ಗೊತ್ತಾಗಿ ಸೆಲ್ಫಿ ಬೈಟ್ ರೆಕಾರ್ಡ್ ಮಾಡಿ ಫೇಸ್ ಬುಕ್ ಮೂಲಕ ಸುದೀಪ್ ಮನೆಗೆ ಮರಳಿ ಬರುವಂತೆ ಮನವಿ ಮಾಡಿದ್ದರು. ಗಿರಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸುದೀಪ್ ಕೂಡ ಬಾಲಕ ಮರಳಿರುವುದಕ್ಕೆ ಸಂತಸ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ.
"
