ಕಡೆಗೂ ಬೆಳಗಾವಿಯ ಹೊಸವಂಟಮೂರಿ ಗ್ರಾಮಕ್ಕೆ ತಾತ್ಕಾಲಿಕ ರಿಲೀಫ್ ಸಿಕ್ಕಿದೆ. ಸುಮಾರು ೧೦ ವರುಷಗಳಿಂದ ಕುಡಿಯುವ ನೀರಿಗೆ ಕಿಲೋಮಿಟರ್ ದೂರ ನಡೆಯುತ್ತಿದ್ದ ಮಹಿಳೆಯರ ಮುಖದಲ್ಲಿ ಖುಷಿ ಮೂಡಿದೆ. ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತ ಹೊಸವಂಟಮೂರಿ ಗ್ರಾಮಕ್ಕೆ ಧಾವಿಸಿ ಬಂದು ನೀರಿನ ವ್ಯವಸ್ಥೆಯನ್ನೂ ಮಾಡಿದ್ದಾರೆ. ಸುಮಾರು ೧೬ ಟ್ಯಾಂಕರ್ ನೀರನ್ನು ತರಿಸಿ ಗ್ರಾಮದ ನೀರಿನ ದಾಹ ತೀರಿಸುವಲ್ಲಿ ಜಿಲ್ಲಾಧಿಕಾರಿ ಜಯರಾಂ ಸಕ್ಸಸ್ ಆದ್ರು. ಇದು ಸುವರ್ಣ ನ್ಯೂಸ್​ ಫಲಶ್ರುತಿ ಅಂತ ಗ್ರಾಮಸ್ಥರು ಶ್ಲಾಘಿಸಿದ್ದಾರೆ.

ನಿನ್ನೆ ನೊಂದ ಹೆಣ್ಣು ಮಕ್ಕಳ ಕಣ್ಣೀರ ಕಥೆಯನ್ನ ಸುವರ್ಣ ನ್ಯೂಸ್​ ಗುಟುಕು ನೀರಿಗೆ ಗರ್ಭಪಾತ ಶೀರ್ಷಿಕೆಯಡಿಯಲ್ಲಿ ವರದಿ ಪ್ರಸಾರ ಮಾಡಿ ರಾಜ್ಯ ಸರ್ಕಾರ ಮತ್ತು ಬೆಳಗಾವಿ ಜಿಲ್ಲಾಡಳಿತದ ಕಣ್ಣು ತೆರೆಸಿತ್ತು . ಕೂಡಲೇ ಜಿಲ್ಲಾಡಳಿತವೇ ಹೊಸವಂಟಮೂರಿ ಗ್ರಾಮಕ್ಕೆ ಭೇಟಿ ನೀಡಿ ನೀರಿನ ಸಮಸ್ಯೆ ಬಗೆಹರಿಸಲು ಮುಂದಾಯ್ತು. ತಾತ್ಕಾಲಿಕವಾಗಿ ಗ್ರಾಮಕ್ಕೆ ಟ್ಯಾಂಕರ್ ಮುಖಾಂತರ ಪೂರೈಸಿ ಮಹಿಳೆಯರು ನಿಟ್ಟುಸಿರು ಬಿಡುವಂತೆ ಮಾಡ್ತು.. ಇದು ಸುವರ್ಣ ನ್ಯೂಸ್ ಬಿಗ್ ಇಂಪಾಕ್ಟ್. ಕಡೆಗೂ ಬೆಳಗಾವಿಯ ಹೊಸವಂಟಮೂರಿ ಗ್ರಾಮಕ್ಕೆ ತಾತ್ಕಾಲಿಕ ರಿಲೀಫ್ ಸಿಕ್ಕಿದೆ.

ಸುಮಾರು ೧೦ ವರುಷಗಳಿಂದ ಕುಡಿಯುವ ನೀರಿಗೆ ಕಿಲೋಮಿಟರ್ ದೂರ ನಡೆಯುತ್ತಿದ್ದ ಮಹಿಳೆಯರ ಮುಖದಲ್ಲಿ ಖುಷಿ ಮೂಡಿದೆ. ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತ ಹೊಸವಂಟಮೂರಿ ಗ್ರಾಮಕ್ಕೆ ಧಾವಿಸಿ ಬಂದು ನೀರಿನ ವ್ಯವಸ್ಥೆಯನ್ನೂ ಮಾಡಿದ್ದಾರೆ. ಸುಮಾರು ೧೬ ಟ್ಯಾಂಕರ್ ನೀರನ್ನು ತರಿಸಿ ಗ್ರಾಮದ ನೀರಿನ ದಾಹ ತೀರಿಸುವಲ್ಲಿ ಜಿಲ್ಲಾಧಿಕಾರಿ ಜಯರಾಂ ಸಕ್ಸಸ್ ಆದ್ರು. ಇದು ಸುವರ್ಣ ನ್ಯೂಸ್​ ಫಲಶ್ರುತಿ ಅಂತ ಗ್ರಾಮಸ್ಥರು ಶ್ಲಾಘಿಸಿದ್ದಾರೆ.

ಸುವರ್ಣ ನ್ಯೂಸ್ ಜನಪರ ಕಾರ್ಯಕ್ಕೆ ಶುಭಾಶಯಗಳ ಮಹಾಪೂರವೇ ಹರಿದು ಬಂತು. ಖುದ್ದು ಜಿಲ್ಲಾಧಿಕಾರಿಗಳೇ ಧನ್ಯವಾದ ಹೇಳಿ ಬೆನ್ನು ತಟ್ಟಿದ್ರು.

ಒಟ್ಟಿನಲ್ಲಿ ನೀರಿನ ದಾಹಕ್ಕೆ ಹಲವು ಮಹಿಳೆಯರು ತಮ್ಮ ಕರುಳಬಳ್ಳಿಯನ್ನೇ ಹಿಸುಕುತ್ತಿದ್ದರು. ಗರ್ಭವೂ ಜಾರುತ್ತಿತ್ತು. ಇವತ್ತು ಸುವರ್ಣ ನ್ಯೂಸ್ ತಾತ್ಕಾಲಿಕವಾಗಿ ನೀರಿನ ಸಮಸ್ಯೆ ನೀಗಿಸಿದೆ. ಇನ್ನು ಸಚಿವ ರಮೇಶ್ ಜಾರಕಿಹೊಳಿ ಅಸ್ಥೆವಹಿಸಿ ಗ್ರಾಮದ ಪಕ್ಕದಲ್ಲಿರೋ ಘಟಪ್ರಭಾ ನದಿಯಿಂದ ನೀರು ಕೊಟ್ಟು ಜವಾಬ್ದಾರಿ ತೋರಲಿ ಅನ್ನುವುದು ಸುವರ್ಣ ನ್ಯೂಸ್ ಆಶಯ.

ವರದಿ: ಮಂಜುನಾಥ್ ಎಚ್ ಪಾಟೀಲ್, ಸುವರ್ಣ ನ್ಯೂಸ್