ಶಶಿಕಲಾ ಪಾಲಿಗೆ ಪರಪ್ಪನ ಅಗ್ರಹಾರ ಎಐಎಡಿಎಂಕೆ ಕಚೇರಿಯಾಗಿದೆ.ಜೈಲಿನ ಶಶಿಕಲಾಗೆ ನೀಡಿದ್ದ ವಿಶೇಷ ಕೊಡುಗೆಗಳ ಸಾಕ್ಷಿ ಆರ್'ಟಿಐ ಮೂಲಕ ಸುವರ್ಣ ನ್ಯೂಸ್ಗೆ ಲಭ್ಯವಾಗಿದ್ದು, ಶಶಿಕಲಾಗಾಗಿ ಜೈಲಿನ ನಿಯಮಗಳನ್ನೇ ಅಧಿಕಾರಿಗಳು ಗಾಳಿಗೆ ತೂರಿದ್ದಾರೆ.
ಬೆಂಗಳೂರು(ಜು.17): ಪರಪ್ಪನ ಅಗ್ರಹಾರದಲ್ಲಿ ಅಕ್ರಮ ಆಸ್ತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಶಿಕ್ಷೆ ಅನುಭವಿಸುತ್ತಿರುವ ಎಐಎಡಿಎಂಕೆ ನಾಯಕಿ ಶಶಿಕಲಾ ಜೈಲಿನಲ್ಲಿ ಯಾವ ಸ್ಟಾರ್ ಹೋಟಲ್'ನಲ್ಲೂ ಕಡಿಮೆಯಿರದ ಐಶಾರಾಮಿ ಶೈಲಿಯಲ್ಲಿ ಜೀವನ ಸಾಗಿಸುತ್ತಿರುವ ಬಗ್ಗೆ ಸುವರ್ಣ ನ್ಯೂಸ್'ಗೆ ಮಾಹಿತಿ ಲಭ್ಯವಾಗಿದೆ.
ಜೈಲಿನಲ್ಲಿ ಶಶಿಕಲಾ ಬದುಕು ಬಿಂದಾಸ್ ಆಗಿದೆ. ಸೆರೆಮನೆಯಲ್ಲಿ ಶಶಿಕಲಾ ಬೆಂಬಲಿಗರನ್ನು ಹೇಳುವವರಿಲ್ಲ ಹಾಗೂ ಕೇಳುವವರಿಲ್ಲದಂದಾಗಿದೆ. ಅವರು ಬೇಕೆಂದಾಗ ಜೈಲಿಗೆ ಬರಬಹುದು, ಬೇಕಾದಷ್ಟು ಹೊತ್ತು ಮಾತನಾಡಬಹುದು.ಶಶಿಕಲಾ ಬೆಂಬಲಿಗ ನಾಯಕರಿಗೆ ತೆರೆದ ಮನೆಯಾಗಿದ್ದ ಕಾರಾಗೃಹ.
ಶಶಿಕಲಾಪಾಲಿಗೆಜೈಲೇಪಾರ್ಟಿಆಫೀಸ್
ಶಶಿಕಲಾ ಪಾಲಿಗೆ ಪರಪ್ಪನ ಅಗ್ರಹಾರ ಎಐಎಡಿಎಂಕೆ ಕಚೇರಿಯಾಗಿದೆ.ಜೈಲಿನ ಶಶಿಕಲಾಗೆ ನೀಡಿದ್ದ ವಿಶೇಷ ಕೊಡುಗೆಗಳ ಸಾಕ್ಷಿ ಆರ್'ಟಿಐ ಮೂಲಕ ಸುವರ್ಣ ನ್ಯೂಸ್ಗೆ ಲಭ್ಯವಾಗಿದ್ದು, ಶಶಿಕಲಾಗಾಗಿ ಜೈಲಿನ ನಿಯಮಗಳನ್ನೇ ಅಧಿಕಾರಿಗಳು ಗಾಳಿಗೆ ತೂರಿದ್ದಾರೆ.
ಶಶಿಕಲಾ ಬೆಂಬಲಿಗರನ್ನು ಭೇಟಿಯಾಗಲು ಮುಕ್ತ ಅವಕಾಶ ನೀಡಿದ್ದ ಅಧಿಕಾರಿಗಳು 117 ದಿನಗಳಲ್ಲಿ 82 ಬೆಂಬಲಿಗರನ್ನು ಶಶಿಕಲಾ ಭೇಟಿ ಮಾಡಿದ್ದಾರೆ.ಶಶಿಕಲಾಗೆ 32 ಬಾರಿ ತನ್ನ ಕಡೆಯವರನ್ನು ಭೇಟಿ ಮಾಡಲು ಅವಕಾಶ ನೀಡಲಾಗಿದೆ. ಜೈಲಿನ ನಿಯಮಗಳ ಪ್ರಕಾರ ಸಜಾ ಕೈದಿಯನ್ನು 15 ದಿನಕ್ಕೊಮ್ಮೆ ಮಾತ್ರ ಭೇಟಿಗೆ ಅವಕಾಶವಿದೆ.ಜೈಲಿನ ನಿಯಮಗಳ ಪ್ರಕಾರ
8 ಭೇಟಿಗೆ ಮಾತ್ರ ಅವಕಾಶ ನೀಡಬೇಕಾಗಿತ್ತು. ಆದರೆ, ಶಶಿಕಲಾಗೆ ತನ್ನ ಬೆಂಬಲಿಗರನ್ನು ಭೇಟಿಯಾಗಲು 32 ಬಾರಿ ಅವಕಾಶ ನೀಡಿದ್ದಾರೆ. ಬೆಳಗ್ಗೆ 11 ಗಂಟೆಯಿಂದ 5 ಗಂಟೆವರೆಗೆ ಮಾತ್ರ ಕೈದಿಗಳನ್ನು ಭೇಟಿ ಮಾಡಲು ಅವಕಾಶವಿದೆ.ನಿಯಮ ಮೀರಿಯೂ ಶಶಿಕಲಾ, ಬೆಂಬಲಿಗರ ಭೇಟಿಗೆ ಅವಕಾಶ ನೀಡಲಾಗಿದೆ. ಡೆಪ್ಯೂಟಿ ಸ್ಪೀಕರ್ ತಂಬಿದೊರೈ, ಟಿಟಿವಿ ದಿನಕರನ್ ಸೇರಿ ಹಲವು ಎಐಡಿಎಂಕೆ ನಾಯಕರು ಶಶಿಕಲಾರನ್ನು ಭೇಟಿ ಮಾಡಿದ್ದಾರೆ. ಶಿಶಿಕಲಾ ಪರ ವಕೀಲರು, ಕುಟುಂಬ ಸದಸ್ಯರು, ಜೈಲಿನಲ್ಲೇಯೇ ಚಿನ್ನಮ್ಮನ ಜೊತೆ ಚರ್ಚೆ ನಡೆಸಿದ್ದಾರೆ. ಫೆಬ್ರವರಿ 16ರಿಂದ ಮೇ 31ರವರೆಗೆ ಹಲವು ಎಐಡಿಎಂಕೆ ನಾಯಕರನ್ನು ಈಕೆ ಭೇಟಿ ಮಾಡಿದ್ದಾರೆ.
ಶಶಿಕಲಾಗಾಗಿಸ್ಟಾರ್ಹೋಟೆಲ್ಆದಪರಪ್ಪನಅಗ್ರಹಾರ!
ಎಐಡಿಎಂಕೆ ನಾಯಕಿ ಶಶಿಕಲಾಗೆ ಜೈಲಿನಲ್ಲೇ ರಾಜಾತಿಥ್ಯ ಪಡೆಯುತ್ತಿರುವುದು ದೃಶ್ಯಗಳಿಂದ ಅಕ್ಷರಶಃ ಸಾಬೀತಾಗಿದೆ.ಜೈಲಿನಲ್ಲಿ ಶಶಿಕಲಾಗೆ 5 ಕೊಠಡಿಗಳನ್ನು ನೀಡಲಾಗಿದೆ. ಚಿನ್ನಮ್ಮನಿಗೆಂದೆ 5 ವಿಶೇಷ ರೂಮ್ಗಳನ್ನು ಸಿದ್ದಗೊಳಿಸಲಾಗಿದೆ.ಆಹಾರ ಸಿದ್ಧಪಡಿಸಲು ವಿಶೇಷ ಅಡುಗೆ ಮನೆ, ವಿಸಿಟರ್ಗಳನ್ನು ಭೇಟಿಯಾಗಲು ಪ್ರತ್ಯೇಕ ಕೊಠಡಿ ವ್ಯವಸ್ಥೆಯಿದೆಯೆಂದು ದೃಶ್ಯಗಳೆ ಹೇಳುತ್ತಿವೆ. ವಿಶೇಷ ಸವಲತ್ತು ಪಡೆಯಲು ಶಶಿಕಲಾ 2 ಕೋಟಿ ರೂ. ಲಂಚ ನೀಡಿದ್ದರೆಂದು ಡಿಐಜಿ ರೂಪ ಆರೋಪಿಸಿದ್ದರು. ಪ್ರಸ್ತುತ ಅವರನ್ನು ಟ್ರಾಫಿಕ್ ಆಯುಕ್ತರನ್ನಾಗಿ ವರ್ಗಾವಣೆ ಮಾಡಲಾಗಿದೆ. ಬಂದೀಖಾನೆ ಡಿಜಿಪಿ ಸತ್ಯನಾರಾಯಣರಾವ್ ಅವರನ್ನು ಕಡ್ಡಾಯ ರಜೆಯ ಮೇಲೆ ತೆರಳಲು ಸೂಚಿಸಲಾಗಿದೆ.
