ಬರದಿಂದ ತತ್ತರಿಸುತ್ತಿರುವ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕುಡಿಯುವ ನೀರು ಕೂಡ ವಿಷವಾಗಿದೆ. ಕುಡಿಯುವ ನೀರಿನಲ್ಲಿ ಅಧಿಕ ಫ್ಲೋರೈಡ್ ಅಂಶ ಕಂಡುಬಂದಿದ್ದು, ಯುವಕರು ಮುದುಕರಂತೆ ಕಾಣುತ್ತಿದ್ದರು. ಮಕ್ಕಳು ದಂತ ಸಮಸ್ಯೆಯಿಂದ ಬಳಲುತ್ತಿದ್ದರು. ಈ ಬಗ್ಗೆ ಸುವರ್ಣನ್ಯೂಸ್ ವರದಿ ಪ್ರಸಾರ ಮಾಡಿತ್ತು. ಇದರಿಂದ ಎಚ್ಚೆತ್ತಿರುವ ಜಿಲ್ಲಾಡಳಿತ ಇದೀಗ ಕುಡಿಯುವ ಶುದ್ದ ನೀರಿನ ಘಟಕ ಸ್ಥಾಪಿಸಲು ಮುಂದಾಗಿದೆ.
ಚಿಕ್ಕಬಳ್ಳಾಪುರ(ಜ.18): ಬರದಿಂದ ತತ್ತರಿಸುತ್ತಿರುವ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕುಡಿಯುವ ನೀರು ಕೂಡ ವಿಷವಾಗಿದೆ. ಕುಡಿಯುವ ನೀರಿನಲ್ಲಿ ಅಧಿಕ ಫ್ಲೋರೈಡ್ ಅಂಶ ಕಂಡುಬಂದಿದ್ದು, ಯುವಕರು ಮುದುಕರಂತೆ ಕಾಣುತ್ತಿದ್ದರು. ಮಕ್ಕಳು ದಂತ ಸಮಸ್ಯೆಯಿಂದ ಬಳಲುತ್ತಿದ್ದರು. ಈ ಬಗ್ಗೆ ಸುವರ್ಣನ್ಯೂಸ್ ವರದಿ ಪ್ರಸಾರ ಮಾಡಿತ್ತು. ಇದರಿಂದ ಎಚ್ಚೆತ್ತಿರುವ ಜಿಲ್ಲಾಡಳಿತ ಇದೀಗ ಕುಡಿಯುವ ಶುದ್ದ ನೀರಿನ ಘಟಕ ಸ್ಥಾಪಿಸಲು ಮುಂದಾಗಿದೆ.
ಈಗ ಎಲ್ಲಿ ನೋಡಿದರೂ, ನೀರಿನ ಸಮಸ್ಯೆ. ಇದಕ್ಕೆ ಚಿಕ್ಕಬಳ್ಳಾಪುರ ಜಿಲ್ಲೆ ಕೂಡ ಹೊರತಾಗಿಲ್ಲ. ಕಳೆದ 6 ವರ್ಷಗಳಿಂದ ಬರಗಾಲಕ್ಕೆ ತುತ್ತಾಗಿರುವ ಈ ಜಿಲ್ಲೆಯಲ್ಲಿ 1200 ರಿಂದ 1300 ಅಡಿ ಬೋರ್ ವೆಲ್ ಕೊರೆಸಿದರು ನೀರು ಸಿಗುತ್ತಿಲ್ಲಾ. ಸಿಗುವ ನೀರು ಕುಡಿಯಲು ಯೋಗ್ಯವಿಲ್ಲ. ಫ್ಲೋರೈಡ್ ನೀರಿನಿಂದಾಗಿ 91 ಗ್ರಾಮಗಳಲ್ಲಿ ಸಿಗುತ್ತಿರುವ ನೀರು ವಿಷಕಾರಿಯಾಗಿತ್ತು. ಈ ಪೈಕಿ ಬಾಗೇಪಲ್ಲಿ ತಾಲೂಕಿನ 53 ಗ್ರಾಮಗಳಲ್ಲಿ, ಪ್ಲೂರೈಡ್ ಅತಿ ಹೆಚ್ಚು ಪ್ರಮಾಣದಲ್ಲಿ ಕಂಡುಬಂದಿತ್ತು. ಈ ಬಗ್ಗೆ ಸುವರ್ಣ ನ್ಯೂಸ್ ವರದಿ ಪ್ರಸಾರ ಮಾಡಿತ್ತು. ಇದರಿಂದ ಎಚ್ಚೆತ್ತ ಜಿಲ್ಲಾಡಳಿತ ಈ ಗ್ರಾಮಗಳಲ್ಲಿ ಶುದ್ದ ಕುಡಿಯುವ ನೀರಿನ ಘಟಕ ಸ್ಥಾಪಿಸಲು ಮುಂದಾಗಿದೆ.
ಇನ್ನೂ 448 ಶಾಲೆಗಳ 12, 544 ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಒಳಪಡಿಸಿದಾಗ 5885 ವಿದ್ಯಾರ್ಥಿಗಳಲ್ಲಿ ದಂತ ಪ್ಲೋರೊಸಿಸ್ ಹಾಗೂ 117 ಮಂದಿಗೆ ಮೂಳೆ ಫ್ಲೋರೊಸಿಸ್ ಇರುವ ಆಘಾತಕಾರಿ ಅಂಶ ಪತ್ತೆಯಾಗಿತ್ತು . ಈ ನೀರು ಸೇವನೆಯಿಂದ ಹಲ್ಲುಗಳು ಹಳದಿಯಾಗುತ್ತದೆ. ಮೂಳೆಗಳ ಸವೆತದಿಂದ ಯುವಕರು ಕೂಡ ಮುದುಕರಾಗಿ ಕಾಣುತ್ತಿದ್ದರು. ಇದೀಗ ಈ ಸಮಸ್ಯೆಗೆ ಇತಿಶ್ರೀ ಹಾಡಲು ಜಿಲ್ಲಾಡಳಿತ ಮುಂದಾಗಿದೆ. ಇಂತಹ ಗಂಭೀರ ಸಮಸ್ಯೆಯನ್ನು ಜಿಲ್ಲಾಡಳಿತದ ಗಮನಕ್ಕೆ, ತಂದ ಸುವರ್ಣ ನ್ಯೂಸ್‌ಗೆ ಬಾಗೇಪಲ್ಲಿ ಸಾರ್ವಜನಿಕರು ಅಭಿನಂದನೆಗಳನ್ನು ತಿಳಿಸಿದರು.
ಒಂದು ಜವಾಬ್ದಾರಿ ಮಾಧ್ಯಮವಾಗಿ ಸುವರ್ಣ ನ್ಯೂಸ್ ಸಾಮಾಜಿಕ ಸಮಸ್ಯೆಗಳನ್ನು ಬೆಳಕು ಚೆಲ್ಲುತ್ತಿದ್ದು, ಮುಂದೆ ಇನ್ನಷ್ಟು ಸಮಸ್ಯೆಗಳತ್ತ ಗಮನ ಹರಿಸಲಿದೆ.
