ಚೆನ್ನೈ (ಸೆ.27): ತಮಿಳುನಾಡು ಸಿಎಂ ಜಯಲಲಿತಾ ಆರೋಗ್ಯ ಸ್ಥಿತಿ ಇನ್ನೂ ನಿಗೂಢವಾಗಿದೆ. ಕಳೆದ ಗುರುವಾರ ಚೆನ್ನೈನ ಅಪೋಲೋ ಆಸ್ಪತ್ರೆಗೆ ದಾಖಲಾಗಿರುವ ಜಯಲಲಿತಾ ಅವರು ಆಸ್ಪತ್ರೆಯಲ್ಲಿರುವ ಫೋಟೋವನ್ನಾಗಲಿ, ವಿಡಿಯೋವನ್ನಾಗಲಿ ಯಾರಿಗೂ ಕೊಡುತ್ತಿಲ್ಲ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಆಸ್ಪತ್ರೆ ವೈದ್ಯರ ಹೇಳಿಕೆ ಬಿಟ್ಟು ಏನೇನೂ ಮಾಹಿತಿ ಸಿಗುತ್ತಿಲ್ಲ. ಇವುಗಳನ್ನು ಗಮನಿಸಿದಾಗ ಜಯಲಲಿತಾ ಆರೋಗ್ಯದ ಸಮಸ್ಯೆ ಗಂಭೀರವಾಗಿರಬಹುದು ಎಂಬ ಅನುಮಾನ ಮೂಡಿದೆ.

ಇದಲ್ಲದೆ, ಅಪೋಲೋ ಆಸ್ಪತ್ರೆಯ ಸಿಸಿಟಿವಿ ದೃಶ್ಯಗಳನ್ನು ಅಧಿಕಾರಿಗಳು ಡಿಲೀಟ್ ಮಾಡಿದ್ದಾರೆ ಎಂಬ ಆರೋಪವೂ ಕೇಳಿ ಬಂದಿದೆ.

ಸದ್ಯಕ್ಕಿರುವ ಮಾಹಿತಿ ಎಂದರೆ, ಜಯಲಲಿತಾರನ್ನು ಸಿಂಗಾಪುರಕ್ಕೆ ಕರೆದೊಯ್ಯುವ ನಿರ್ಧಾರ ಕೈಬಿಟ್ಟು, ಮುಂಬೈನಿಂದ ಆಗಮಿಸಿರುವ ವೈದ್ಯರ ತಂಡದಿಂದ ಚಿಕಿತ್ಸೆ ಕೊಡಿಸಲಾಗುತ್ತಿದೆ.