ಡೆಹ್ರಾಡೂನ್(ಜು.10): ಪತ್ರಕರ್ತನಿಗೆ ಜೀವಬೆದರಿಕೆ ಹಾಕಿದ ಆರೋಪದ ಮೇಲೆ ಬಿಜೆಪಿಯಿಂದ ಉಚ್ಛಾಟಿತಗೊಂಡಿರುವ ಶಾಸಕನೋರ್ವ ನಿಷೇಧಿತ ಬಂದೂಕುಗಳೊಂದಿಗೆ ನೃತ್ಯ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ.

ಉತ್ತರಾಖಂಡ್'ನ ಹರಿದ್ವಾರದ ಲಕ್ಸರ್ ಶಾಸಕರಾಗಿದ್ದ ಕುವರ್ ಪ್ರಣವ್ ಸಿಂಗ್, ಆಯುಧಗಳೊಂದಿಗೆ ಹಿಂದಿ ಹಾಡೊಂದಕ್ಕೆ ಬೆಂಬಲಿಗರೊಂದಿಗೆ ನೃತ್ಯ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ.

ಪತ್ರಕತ್ರನಿಗೆ ಜೀವ ಬೆದರಿಕೆ ಹಾಕಿದ ಆರೋಪದ ಮೇಲೆ ಪಕ್ಷದಿಂದ ಉಚ್ಛಾಟನೆಗೊಂಡಿರುವ ಕುವರ್ ಪ್ರಣವ್ ಸಿಂಗ್, ಈ ಹಿಂದೆಯೂ ಹಲವು ಬಾರಿ ಇದೇ ರೀತಿಯ ಅಶ್ಲೀಲ ವರ್ತನೆ ತೋರಿದ್ದಾರೆ ಎನ್ನಲಾಗಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಬಿಜೆಪಿ ರಾಷ್ಟ್ರೀಯ ಮಾಧ್ಯಮ ವಕ್ತಾರ ಅನಿಲ್ ಬುರಾನಿ, ಪ್ರಣವ್ ಅವರ ಇಂತಹ ವರ್ತನೆಯಿಂದಲೇ ಅವರನ್ನು ಪಕ್ಷದಿಂದ ಉಚ್ಛಾಟಿಸಲಾಗಿದೆ ಎಂದು ಅಸಮಾಧಾನ ಹೊರ ಹಾಕಿದ್ದಾರೆ.