ಮಗ ತೀರಿಕೊಂಡ ಮೂರು ತಿಂಗಳ ನಂತರ ತಾಯಿಗೆ ತನ್ನ ಮಗನ ಕೊಲೆ ಆಗಿದೆ ಎಂಬ ಅನುಮಾನ ಬಲವಾಗಿದ್ದು  ಮಗನ ಸಾವು ಸಂಭವಿಸಿ 3 ತಿಂಗಳ ನಂತರ ಅದು ಕೊಲೆ ಅಂತ ಪೊಲೀಸರಿಗೆ ದೂರು ನೀಡಿದ್ದಾರೆ.

ಮೈಸೂರು(ಜ.20): ಮಗ ತೀರಿಕೊಂಡ ಮೂರು ತಿಂಗಳ ನಂತರ ತಾಯಿಗೆ ತನ್ನ ಮಗನ ಕೊಲೆ ಆಗಿದೆ ಎಂಬ ಅನುಮಾನ ಬಲವಾಗಿದ್ದು ಮಗನ ಸಾವು ಸಂಭವಿಸಿ 3 ತಿಂಗಳ ನಂತರ ಅದು ಕೊಲೆ ಅಂತ ಪೊಲೀಸರಿಗೆ ದೂರು ನೀಡಿದ್ದಾರೆ.

ಮೈಸೂರು ಜಿಲ್ಲೆ ಟಿ.ನರಸೀಪುರ ತಾಲೂಕಿನ ಬನ್ನೂರು ಗ್ರಾಮದ ಮಂಗಳಮ್ಮ ಎಂಬುವರು ತನ್ನ ಮಗನ ಕೊಲೆಯನ್ನು ಆತನ ಪ್ರೇಯಸಿ ಮನೆಯವರು ಮಾಡಿಸಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ. ಈಕೆಯ ಒಬ್ಬನೇ ಮಗ ಶಶಿಧರ್​ ವೃತ್ತಿಯಲ್ಲಿ ಡ್ರೈವರ್​ ಆಗಿದ್ದು, ಇದೇ ಗ್ರಾಮದಲ್ಲಿ ಎಂ.ಟೆಕ್ ಓದುತ್ತಿದ್ದ ಅಕ್ಷತಾ ಎಂಬುವಳನ್ನು ಪ್ರೀತಿಸುತ್ತಿದ್ದ. ಇವರ ಪ್ರೀತಿ ಕಳೆದ 4 ವರ್ಷಗಳಿಂದ ನಡೆಯುತ್ತಿತು. ಇದಕ್ಕೆ ಸಾಕ್ಷಿ ಎಂಬಂತೆ ಇಬ್ಬರು ಜೊತೆಯಾಗಿ ಮೈಸೂರಿನ ಸುತ್ತಮುತ್ತ, ಮಂಡ್ಯ, ಮಡಿಕೇರಿ ಹಾಗೂ ದೂರದ ಆಂಧ್ರಪ್ರದೇಶದ ನೂರಾರು ಪ್ರವಾಸಿತಾಣಗಳನ್ನು ಸುತ್ತಾಡಿದ್ದಾರೆ. ಈ ವಿಚಾರ ಶಶಿಧರ್​ ತಾಯಿಗೂ ಕೂಡ ಗೊತ್ತಾಗಿದ್ದು, ಪರೀಕ್ಷೆಗಳು ಮುಗಿದ ತಕ್ಷಣ ತನ್ನನ್ನ ಅಕ್ಷತಾ ಮದುವೆ ಆಗುವುದಾಗಿ ಹೇಳುದ್ದಾಳೆ ಎಂದಯ ತಾಯಿಗೆ ಹೇಳಿದ್ದಾನೆ.

ಆದರೆ ಕಳೆದ ಸೆಪ್ಟಂಬರ್​ 8 ರಂದು ಬೆಳಿಗ್ಗೆ ಶಶಿಧರ್​ ಯಾವುದೋ ಮುಖ್ಯವಾದ ಕೆಲಸಕ್ಕಾಗಿ ಮೈಸೂರಿಗೆ ಹೋಗಿದ್ದ. ಅವತ್ತು ಅಕ್ಷತಾ ಹಾಗೂ ಆಕೆಯ ತಂದೆ ಗಂಗಾಧರ್​ ಜೊತೆ ಮಾತನಾಡಿ ವಾಪಸ್​ ಬರುತ್ತೇನೆಂದು ಹೋಗಿ ಬಂದಿದ್ದು ಹೆಣವಾಗಿ. ಆತನ ಗೆಳೆಯರೆಲ್ಲರೂ ನಿಮ್ಮ ಮಗ ಮೈಸೂರಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಹೇಳಿ ಆತನ ಶವವನ್ನು ಊರಿಗೆ ತಂದು ಮರಣೋತ್ತರ ಪರೀಕ್ಷೆಯನ್ನೂ ಮಾಡಿಸದೆ ಅಂತ್ಯಕ್ರಿಯೆ ಮಾಡಿದ್ದಾರೆ.

ಒಂದು ದಿನದ ನಂತರ ಆತನ ಮೊಬೈಲ್​ ಕೊಟ್ಟಾಗ ಅದರಲ್ಲಿ ಯಾವುದೇ ದಾಖಲಾತಿಗಳು ಇರಲಿಲ್ಲ. ಇದೆಲ್ಲಕ್ಕೂ ಮೇಲಾಗಿ ಶಶಿಧರ್​ ತಾನು ಮತ್ತು ಅಕ್ಷತಾ ಜೊತೆಯಾಗಿದ್ದ ಫೋಟೋಗಳನ್ನು ಫೇಸ್​ಬುಕ್​ನಲ್ಲಿ ಅಪ್​ಲೋಡ್​ ಮಾಡಿದ ನಂತರ ಆತನ ಸಾವು ಅನುಮಾನಾಸ್ಪದವಾಗಿ ಆಗಿರುವುದರಿಂದ ಅನುಮಾನಗಳು ಹೆಚ್ಚಾಗಿದ್ದು, ಈಗ ತಮ್ಮ ಮಗನ ಸಾವಿಗೆ ನ್ಯಾಯ ದೊರಕಿಸಿಕೊಡಿ ಎಂದು ಮೈಸೂರು ಎಸ್'ಪಿ ರವಿಚನ್ನಣ್ಣನವರ್​ ಮೊರೆ ಹೋಗಿದ್ದಾರೆ