ಕರಾಚಿ ಮೂಲದ ವಧುವಿನ ಕಡೆ ಯಾರೊಬ್ಬರಿಗೂ ವೀಸಾ ಸಿಕ್ಕಿಲ್ಲ. ಹೀಗಾಗಿ ದಯವಿಟ್ಟು ವೀಸಾ ವ್ಯವಸ್ಥೆ ಮಾಡಿ ಅಂತ ನರೇಶ್​ ಟ್ವೀಟರ್​​ನಲ್ಲಿ ಸುಷ್ಮಾ ಸ್ವರಾಜ್​ಗೆ ಮನವಿ ಮಾಡಿಕೊಂಡಿದ್ದಾನೆ. ಟ್ವೀಟರ್​ ದೂರು ಪರಿಗಣಿಸಿರುವ ಸುಷ್ಮಾ ಸ್ವರಾಜ್​ ನಿಮಗೆ ಸಹಾಯ ಮಾಡುವುದಾಗಿ ಭರವಸೆ ನೀಡಿದ್ದಾರೆ.

ನವದೆಹಲಿ (ಅ.08): ಭಾರತ-ಪಾಕಿಸ್ತಾನ ನಡುವಿನ ಕದನ ಸ್ಥಿತಿಗೆ ಒಂದು ಮದುವೆ ಬ್ರೇಕ್​ ಹಾಕಿದೆ. ಕರಾಚಿ ಮೂಲದ ವಧು ಪ್ರಿಯಾ ಹಾಗೂ ಭಾರತದ ರಾಜಸ್ಥಾನ ದ ಜೋದ್​ಪುರ ಮೂಲದ ನರೇಶ್​ ಮದುವೆ ನಿಶ್ಚಯಗೊಂಡು ಮೂರು ತಿಂಗಳಾಗಿದೆ.

ಆದರೆ ಈವರೆಗೂ ವೀಸಾ ಸಿಕ್ಕಿಲ್ಲ. ವಧು ಭಾರತಕ್ಕೆ ಬರುವ ವೇಳೆ ಕಾಶ್ಮೀರದ ಉರಿ ಮೇಲೆ ಉಗ್ರರ ದಾಳಿ ನಡೆಯಿತು. ಹಾಗಾಗಿ ಪ್ರಿಯಾ ಹಾಗೂ ಮತ್ತವರ ಕುಟುಂಬದವರಿಗೆ ವೀಸಾ ಸಿಕ್ಕಿಲ್ಲ. ಹೀಗಾಗಿ ಮದುವೆ ನಡೆಯುತ್ತೋ ಇಲ್ಲವೋ ಅನ್ನೋ ಆತಂಕ ಎರಡೂ ಕುಟುಂಬಗಳಲ್ಲಿ ಮನೆ ಮಾಡಿದೆ.

ಈ ಮಧ್ಯೆ ವರ ನರೇಶ್​ ವಿದೇಶಾಂಗ ಸಚಿವಾಲಯದ ಮೊರೆ ಹೋಗಿದ್ದಾನೆ. ಮೂರು ತಿಂಗಳ ಹಿಂದೆಯೇ ವಧು ಮತ್ತು ಅವರ ಕುಟುಂಬದವರು ದಾಖಲೆಗಳ ಸಮೇತ ವೀಸಾಗಾಗಿ ಅರ್ಜಿ ಸಲ್ಲಿಸಿದ್ದಾರೆ.

ಮದುವೆಗೆ ಕೇವಲ ಒಂದು ತಿಂಗಳ ಬಾಕಿ ಇದೆ. ಇನ್ನೂ ವಧುವಿನ ಕಡೆ ಯಾರೊಬ್ಬರಿಗೂ ವೀಸಾ ಸಿಕ್ಕಿಲ್ಲ. ಹೀಗಾಗಿ ದಯವಿಟ್ಟು ವೀಸಾ ವ್ಯವಸ್ಥೆ ಮಾಡಿ ಅಂತ ನರೇಶ್​ ಟ್ವೀಟರ್​​ನಲ್ಲಿ ಸುಷ್ಮಾ ಸ್ವರಾಜ್​ಗೆ ಮನವಿ ಮಾಡಿಕೊಂಡಿದ್ದಾನೆ.

ಟ್ವೀಟರ್​ ದೂರು ಪರಿಗಣಿಸಿರುವ ಸುಷ್ಮಾ ಸ್ವರಾಜ್​ ನಿಮಗೆ ಸಹಾಯ ಮಾಡುವುದಾಗಿ ಭರವಸೆ ನೀಡಿದ್ದಾರೆ.