ನವದೆಹಲಿ[ಜೂ.11]: ಬಿಜೆಪಿಯ ಹಿರಿಯ ನಾಯಕಿ, ವಿದೇಶಾಂಗ ಖಾತೆಯ ಮಾಜಿ ಸಚಿವೆ ಸುಷ್ಮಾ ಸ್ವರಾಜ್‌ ಅವರನ್ನು ಆಂಧ್ರಪ್ರದೇಶದ ನೂತನ ರಾಜ್ಯಪಾಲರಿಗೆ ಕೇಂದ್ರ ಸರ್ಕಾರ ನೇಮಿಸಿದೆ ಎಂಬ ವದಂತಿಯೊಂದು ಸೋಮವಾರ ಭಾರೀ ಪ್ರಮಾಣದಲ್ಲಿ ಹಬ್ಬಿತ್ತು.

ಕೇಂದ್ರ ಸಚಿವ ಹರ್ಷವರ್ಧನ್‌ ಅವರೇ ಈ ಕುರಿತು ಟ್ವೀಟ್‌ ಮಾಡಿ, ಬಳಿಕ ಕೆಲವೇ ಕ್ಷಣಗಳಲ್ಲಿ ಅದನ್ನು ಅಳಿಸಿ ಹಾಕಿದ್ದಾರೆ. ಸುಷ್ಮಾ, ಅನಾರೋಗ್ಯದ ಕಾರಣ ನೀಡಿ, 2019ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿರಲಿಲ್ಲ. ಅದರ ಬೆನ್ನಲ್ಲೇ, ಇದೀಗ ಪಕ್ಷದ ಹಿರಿಯ ನಾಯಕಿಯನ್ನು ಆಂಧ್ರಪ್ರದೇಶದ ನೂತನ ರಾಜ್ಯಪಾಲರಾಗಿ ಕೇಂದ್ರ ಸರ್ಕಾರ ನೇಮಿಸಿದೆ ಎನ್ನಲಾಗುತ್ತಿದೆ.

ಇದುವರೆಗೆ ಇಎಸ್‌ಎಲ್‌ ನರಸಿಂಹನ್‌ ಅವರೇ ಆಂಧ್ರಪ್ರದೇಶ ಮತ್ತು ತೆಲಂಗಾಣ ಎರಡೂ ರಾಜ್ಯಗಳಿಗೂ ರಾಜ್ಯಪಾಲರಾಗಿ ಕಾರ್ಯನಿರ್ವಹಿಸುತ್ತಿದ್ದರು.