ಸದಾ ಕೆಲಸದ ಒತ್ತಡದಲ್ಲಿರುವ ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌‌ ತಮ್ಮ ಗಂಡನ ಆಯುಷ್ಯ-ಆರೋಗ್ಯಕ್ಕಾಗಿ ಕರ್ವಾಚೌತ್‌ ಆಚರಣೆ ಮಾಡಿದ್ದಾರೆ.
ನವದೆಹಲಿ (ಅ.09): ಸದಾ ಕೆಲಸದ ಒತ್ತಡದಲ್ಲಿರುವ ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ತಮ್ಮ ಗಂಡನ ಆಯುಷ್ಯ-ಆರೋಗ್ಯಕ್ಕಾಗಿ ಕರ್ವಾಚೌತ್ ಆಚರಣೆ ಮಾಡಿದ್ದಾರೆ.
ದೇಶಾದ್ಯಂತ ನಿನ್ನೆ ಲಕ್ಷಾಂತರ ಮಂದಿ ಪತ್ನಿಯರು ತಮ್ಮ ಪತಿಯ ಒಳಿತಿಗಾಗಿ ಕಾರ್ತಿಕ ಚತುರ್ಥಿ ಉಪವಾಸ ಆಚರಿಸಿ, ತಮ್ಮ ಪತಿಯ ಆರೋಗ್ಯ ಮತ್ತು ದೀರ್ಘಾಯುಷ್ಯಕ್ಕಾಗಿ ಇಡೀ ದಿನ ಉಪವಾಸ ವ್ರತ ಮಾಡಿದ್ದಾರೆ. ಕೆಲ ಸುಮಂಗಲಿಯರ ಜೊತೆ ಸೇರಿ ನವದೆಹಲಿಯಲ್ಲಿ ಸುಷ್ಮಾ ಸ್ವರಾಜ್ ಕರ್ವಾಚೌತ್ ಆಚರಣೆ ಮಾಡಿದ್ದು, ಸಾಂಪ್ರದಾಯಿಕ ಉಡುಗೆ ತೊಟ್ಟು ಎಲ್ಲರ ಗಮನ ಸೆಳೆದಿದೆ.
