ನವದೆಹಲಿ(ಸೆ.30): ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಭಾರತೀಯ ಯೋಧರು ನಡೆಸಿದ ದಾಳಿಗೂ ಅಮೆರಿಕದ ಸೀಲ್ ಪಡೆ ಪಾಕ್‌ನ ಅಬ್ಬೊಟಾಬಾದ್‌ನಲ್ಲಿ ಅಡಗಿದ್ದ ಅಲ್‌ಖೈದಾ ಉಗ್ರ ಒಸಾಮಾ ಬಿನ್ ಲಾಡೆನ್ ಹತ್ಯೆಗೆ ಅನುಸರಿಸಿದ ಕಾರ್ಯಾಚರಣೆಗೂ ಸಾಕಷ್ಟು ಸಾಮ್ಯತೆ ಇದೆ.

ಯಾಕೆಂದರೆ ಈ ಎರಡೂ ದಾಳಿಯನ್ನು ನಡೆಸಿದ್ದು ಸೇನೆಯ ನುರಿತ ಕಮಾಂಡೋ ಪಡೆ. ಎರಡೂ ದಾಳಿಯಲ್ಲೂ ಯಾವೊಬ್ಬ ಯೋಧನೂ ಬಲಿಯಾಗಿಲ್ಲ. ದಾಳಿಯ ಉದ್ದೇಶ ಸಂಪೂರ್ಣವಾಗಿ ಈಡೇರಿದೆ. ಜತೆಗೆ, ಈ ಎರಡೂ ದಾಳಿಗಳನ್ನು ರೆಕಾರ್ಡ್ ಮಾಡಲಾಗಿದೆ.

ದಾಳಿಯನ್ನು ಡ್ರೋಣ್ ಮೂಲಕ ಹಾಗೂ ಯೋಧರ ಮೂಲಕ ರೆಕಾರ್ಡ್ ಮಾಡಲಾಗಿದ್ದು, ಈ ವಿಡಿಯೋವನ್ನು ಯಾವಾಗ ಬಿಡುಗಡೆ ಮಾಡಬೇಕು ಎನ್ನುವುದನ್ನು ಮುಂದೆ ಸರ್ಕಾರವೇ ನಿರ್ಧರಿಸಲಿದೆ ಎಂದು ಮೂಲಗಳು ತಿಳಿಸಿವೆ. ಜತೆಗೆ, ದಾಳಿಯ ಕ್ಷಣ ಕ್ಷಣದ ಮಾಹಿತಿ ಪ್ರಧಾನಿ ಮೋದಿ ಅವರಿಗೆ ಇತ್ತು. ದಾಳಿಯ ಲಿತಾಂಶಕ್ಕಾಗಿ ಅವರು ರಾತ್ರಿಯಿಡೀ ಎದ್ದಿದ್ದರು ಎಂದು ಮೂಲಗಳು ತಿಳಿಸಿವೆ.