ವೈದ್ಯರ ಯಡವಟ್ಟು : ಆಪರೇಷನ್ ವೇಳೆ 9 ಇಂಚು ಇಕ್ಕಳ ಹೊಟ್ಟೆಯಲ್ಲೇ ಬಿಟ್ಟರು

First Published 26, Jan 2018, 2:58 PM IST
Surgeons leave nine inch Forceps inside woman During Surgery
Highlights

ಲಂಡನ್’ನ ಪ್ರಸಿದ್ಧ ಆಸ್ಪತ್ರೆಯೊಂದರಲ್ಲಿ ವೈದ್ಯರು ಮಾಡಿದ ಮಹಾ ಯಡವಟ್ಟಿನಿಂದ ಮಹಿಳೆ ಸಮಸ್ಯೆ ಎದುರಿಸಬೇಕಾಯ್ತು.

ಲಂಡನ್ : ಲಂಡನ್’ನ ಪ್ರಸಿದ್ಧ ಆಸ್ಪತ್ರೆಯೊಂದರಲ್ಲಿ ವೈದ್ಯರು ಮಾಡಿದ ಮಹಾ ಯಡವಟ್ಟಿನಿಂದ ಮಹಿಳೆ ಸಮಸ್ಯೆ ಎದುರಿಸಬೇಕಾಯ್ತು.

ಮಹಿಳೆಗೆ ಆಪರೇಷನ್ ಮಾಡುವ ವೇಳೆ ಮಹಿಳೆಯ ಹೊಟ್ಟೆಯಲ್ಲಿ 9 ಇಂಚಿನ ಇಕ್ಕಳ ಬಿಟ್ಟಿದ್ದರು. ಇದಾಗಿ 10 ದಿನಗಳ ಬಳಿಕ ಮಹಿಳೆಗೆ ಹೊಟ್ಟೆಯಲ್ಲಿ ವಿಪರೀತ ನೋವು ಕಾಣಿಸಿಕೊಂಡಿದೆ. ಆಗ ಮತ್ತೆ ಆಸ್ಪತ್ರೆಗೆ ಮರಳಿ ಬಂದು ಪರೀಕ್ಷಿಸಿದಾಗ ವೈದ್ಯ ಮಾಡಿದ  ಈ ಮಹಾ ಯಡವಟ್ಟು ಬಯಲಾಗಿದೆ.

ಈ ಬಗ್ಗೆ ಮಾತನಾಡಿದ ವೈದ್ಯ ಡಾ. ಕೋಫ್ಮನ್, ಮಹಿಳೆ ಆಪರೇಷನ್ ಆದ 10 ದಿನಗಳ ಬಳಿಕ ಹೊಟ್ಟೆನೋವೆಂದು ಮತ್ತೆ ಆಸ್ಪತ್ರೆಗೆ ಬಂದಾಗ ಆಕೆಗೆ ಸಿಟಿ ಸ್ಕ್ಯಾನ್ ಮಾಡಲಾಗಿದೆ. ಈ ವೇಳೆ ಆಕೆಯ ಹೊಟ್ಟೆಯಲ್ಲಿ ಇಕ್ಕಳ ಇರುವುದು ಕಂಡು ಬಂದಿದೆ ಎಂದಿದ್ದಾರೆ.

ಇದರಿಂದ ಮತ್ತೊಮ್ಮೆ ಮಹಿಳೆಗೆ ಆಪರೇಷನ್ ಮಾಡುವ ಮೂಲಕ ಆಕೆಯ ಹೊಟ್ಟೆಯಲ್ಲಿರುವ ಇಕ್ಕಳ ತೆಗೆಯಲಾಗಿದೆ.

loader