ಕಂಬಳ ನಿಷೇಧ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್

Supreme Cout Rejects  PETA PIL on Kambala Ban
Highlights

ಕಂಬಳ ನಿಷೇಧಿಸಬೇಕು‌ ಎಂದು ಪೇಟಾ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದೆ. 

ಬೆಂಗಳೂರು (ಫೆ.12): ಕಂಬಳ ನಿಷೇಧಿಸಬೇಕು‌ ಎಂದು ಪೇಟಾ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದೆ. 

ಕಂಬಳ ಋತು ಮುಕ್ತಾಯಗೊಳ್ಳುತ್ತಿದ್ದು ಕಂಬಳಕ್ಕೆ ನಿಷೇಧ ಹೇರಬೇಕು ಎಂದ ಪೇಟಾ ಪರ ವಕೀಲರು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ನ್ಯಾ. ದೀಪಕ್ ಮಿಶ್ರಾ ನೇತೃತ್ವದ ತ್ರಿಸದಸ್ಯ ಪೀಠ ಇಂದು ವಿಚಾರಣೆ ನಡೆಸಿ, ಪೇಟಾ ಅರ್ಜಿಯನ್ನು ವಜಾಹೊಳಿಸಿದೆ. 

ಕರಾವಳಿಯ ಜನಪ್ರಿಯ ಕ್ರೀಡೆ ಕಂಬಳದಲ್ಲಿ ಪ್ರಾಣಿ ಹಿಂಸೆಯನ್ನು ಮಾಡಲಾಗುತ್ತದೆ. ಇದನ್ನು ನಿಷೇಧಿಸಬೇಕು ಎಂದು ಪೇಟಾ ಒತ್ತಾಯಿಸಿ ಹೖಕೋರ್ಟ್ ಮೆಟ್ಟಿಲೇರಿತ್ತು. ಹೖಕೋರ್ಟ್ ಕಂಬಳಕ್ಕೆ ತಡೆ ಆದೇಶ ನೀಡಿತ್ತು. ಇದು ಭಾರೀ ಸಂಚಲನವನ್ನೇ ಸೃಷ್ಟಿ ಮಾಡಿತು. ಪರ-ವಿರೋಧ ಚರ್ಚೆಗಳು ನಡೆಯಿತು. ಕೊನೆಗೆ ಸರ್ಕಾರ ಹೖಕೋರ್ಟ್ ಆದೇಶಕ್ಕೆ ಸುಗ್ರೀವಾಜ್ಞೆ ತರುವಲ್ಲಿ ಯಶಸ್ವಿಯಾಯಿತು.ಇದನ್ನು ಪ್ರಶ್ನಿಸಿ ಪೇಟಾ ಸುಪ್ರೀಂಕೋರ್ಟ್ ಮೆಟ್ಟಿಲೇರಿತು. ಈಗ ವಿಚಾರಣೆ ನಡೆಯುತ್ತಿದೆ. 

loader