ದೆಹಲಿಯಲ್ಲಿ ವಾಯುಮಾಲಿನ್ಯ ನಿಗದಿತ ಮಟ್ಟ ಮೀರಿದ್ದು ಇದಕ್ಕೆ ಸಂಬಂಧಿಸಿದ ಪಿಐಎಲ್ ವಿಚಾರಣೆಯನ್ನು ಸುಪ್ರೀಂಕೋರ್ಟ್ ನಾಳೆ ನಡೆಸಲಿದೆ.
ದೆಹಲಿ (ನ.07): ದೆಹಲಿಯಲ್ಲಿ ವಾಯುಮಾಲಿನ್ಯ ನಿಗದಿತ ಮಟ್ಟ ಮೀರಿದ್ದು ಇದಕ್ಕೆ ಸಂಬಂಧಿಸಿದ ಪಿಐಎಲ್ ವಿಚಾರಣೆಯನ್ನು ಸುಪ್ರೀಂಕೋರ್ಟ್ ನಾಳೆ ನಡೆಸಲಿದೆ.
ಕೇಂದ್ರದ ಪ್ರತಿನಿಧಿಗಳಾಗಿ ವಕೀಲರು ಹಾಗೂ ದೆಹಲಿ ಸರ್ಕಾರದ ಪರ ಅಧಿಕಾರಿಗಳು ವಿಚಾರಣೆ ವೇಳೆ ಉಪಸ್ಥಿತರಿಬೇಕೆಂದು ನ್ಯಾಯಾಲಯ ಇಚ್ಚಿಸಿದೆ.
ರಾಜ್ಯ ರಾಜಧಾನಿಯಲ್ಲಿ ಕಳೆದ ಕೆಲ ದಿನಗಳಿಂದ ವಾಯು ಮಾಲಿನ್ಯ ಮಿತಿಮೀರಿದೆ. ಕಳೆದ 17 ವರ್ಷಗಳಲ್ಲಿಯೇ ಅತಿ ಹೆಚ್ಚು ವಾಯುಮಾಲಿನ್ಯದಿಂದ ದೆಹಲಿ ಕಂಗಾಲಾಗಿದೆ.ಉಸಿರಾಟ ತೊಂದರೆ, ಅಸ್ತಮಾ, ಕಣ್ಣುರಿ ಅಲರ್ಜಿಯಿಂದ ಜನ ನಿಜಕ್ಕೂ ಹೈರಾಣಾಗಿ ಹೋಗಿದ್ದಾರೆ. ವಯೋವೃದ್ಧರು ಹಾಗೂ ಮಕ್ಕಳ ಸ್ಥಿತಿ ಅಸಹನೀಯ. ಮನೆ ಬಿಟ್ಟು ಕದಲುವುದೇ ಬೇಡ ಅನ್ನುವ ಸ್ಥಿತಿ ಇದೆ.
ಬುಧವಾರದೊಳಗೆ ಆಕಾಶ ತಿಳಿಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಪರಿಸ್ಥಿತಿಯ ಗಂಭೀರತೆ ಅರಿತ ಸುಪ್ರೀಂ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ನಾಳೆ ನಡೆಸಲಿದೆ.
