ಗೋವಾದಲ್ಲಿ ಸರ್ಕಾರ ರಚಿಸಲು ರಾಜ್ಯಪಾಲೆ ಮೃದುಲಾ ಸಿಂಹ ಬಿಜೆಪಿಯನ್ನು ಆಹ್ವಾನಿಸಿರುವುದನ್ನು ಪ್ರಶ್ನಿಸಿ ಗೋವಾ ಕಾಂಗ್ರೆಸ್ ಸುಪ್ರೀಂ ಕೋರ್ಟ್ ಮೊರೆ ಹೋಗಿದೆ.
ನವದೆಹಲಿ (ಮಾ.13): ಗೋವಾದಲ್ಲಿ ಸರ್ಕಾರ ರಚಿಸಲು ರಾಜ್ಯಪಾಲೆ ಮೃದುಲಾ ಸಿಂಹ ಬಿಜೆಪಿಯನ್ನು ಆಹ್ವಾನಿಸಿರುವುದನ್ನು ಪ್ರಶ್ನಿಸಿ ಗೋವಾ ಕಾಂಗ್ರೆಸ್ ಸುಪ್ರೀಂ ಕೋರ್ಟ್ ಮೊರೆ ಹೋಗಿದೆ.
ಹೋಳಿ ರಜೆಯ ಹೊರತಾಗಿಯೂ ವಿಶೇಷ ನ್ಯಾಯಪೀಠವನ್ನು ರಚಿಸಿ ವಿಚಾರಣೆ ನಡೆಸಲು ಮುಖ್ಯ ನ್ಯಾ. ಖೇಹರ್ ಒಪ್ಪಿಕೊಂಡಿದ್ದಾರೆ.
ಅತೀ ದೊಡ್ಡ ಪಕ್ಷವಾಗಿರುವ ಕಾಂಗ್ರೆಸ್ಸನ್ನು ರಾಜ್ಯಪಾಲರು ಆಹ್ವಾನಿಸಬೇಕಿತ್ತು. ಅತೀ ಹೆಚ್ಚು ಮತ ಗಳಿಸಿರುವ ಪಕ್ಷಕ್ಕೆ ಸರ್ಕಾರ ರಚಿಸುವಲ್ಲಿ ಮೊದಲ ಆದ್ಯತೆ ನೀಡಬೇಕೆನ್ನುವ ಸುಪ್ರೀಂಕೋರ್ಟ್ ನ ರಾಮೇಶ್ವರ್ ಪಂಡಿತ್ ತೀರ್ಪಿನ ಆದೇಶವನ್ನು ಕಾಂಗ್ರೆಸ್ ನಾಯಕ ಚಂದ್ರಕಾಂತ್ ಕಾವ್ಲೇಕರ್ ಉದಾಹರಿಸಿದರು.
ಸರ್ಕಾರ ರಚಿಸುವ ಬಗ್ಗೆ ಮಾತುಕತೆ ನಡೆಸಲು ಮನೋಹರ್ ಪರ್ರಿಕರ್ ನೇತೃತ್ವದ ಬಿಜೆಪಿಯನ್ನು ರಾಜ್ಯಪಾಲೆ ಮೃದುಲಾ ಆಹ್ವಾನಿಸಿರುವುದು ಸಾಂವಿಧಾನಿಕ ಪದ್ಧತಿಗೆ ವಿರುದ್ಧವಾಗಿದೆ ಎಂದು ಚಂದ್ರಕಾಂತ್ ಹೇಳಿದ್ದಾರೆ.
