ಸುಪ್ರೀಂ’ನಲ್ಲಿ ಇಂದಿನಿಂದ ರಾಮಜನ್ಮಭೂಮಿ-ಬಾಬ್ರಿ ಮಸೀದಿ ವಿಚಾರಣೆ

First Published 8, Feb 2018, 10:51 AM IST
Supreme Court To Start Final Hearings In Ayodhya Case Today
Highlights

ಅಲ್ಲದೆ ಮಸೀದಿಗೆ ವಿವಾದಿತ ಸ್ಥಳದಿಂದ ಬೇರೆಡೆ ನಿರ್ಮಿಸಿಕೊಳ್ಳಲು ಸೂಚಿಸಿತ್ತು. ಹಿಂದು ಮತ್ತು ಮುಸ್ಲಿಂ ಎರಡೂ ಸಂಘಟನೆಗಳಿಗೆ ವಿವಾದವನ್ನು ಕೋರ್ಟ್’ನಿಂದ ಹೊರಗೆ ಬಗೆಹರಿಸಿಕೊಳ್ಳುವಂತೆ ಸಲಹೆ ನೀಡಿತ್ತು.

ನವದೆಹಲಿ(ಫೆ.08): ವಿವಾದಿತ ರಾಮಜನ್ಮಭೂಮಿ-ಬಾಬ್ರಿ ಮಸೀದಿಯ ಅಂತಿಮ ಹಂತದ ವಿಚಾರಣೆ ಇಂದಿನಿಂದ ಆರಂಭವಾಗಲಿದೆ.ಮುಖ್ಯ ನ್ಯಾಯಾಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ತ್ರಿಸದಸ್ಯ ಪೀಠ ಇಂದು ಮಧ್ಯಾಹ್ನ 2 ಗಂಟೆಗೆ 2.7 ಎಕರೆ ಜಾಗದ 13 ಅರ್ಜಿಗಳ ವಿಚಾರಣೆ ಶುರು ಮಾಡಲಿದೆ.  

ಕಳೆದ 6 ದಶಕಗಳಿಂದ ಬಾಕಿಯಿದ್ದ ವಿವಾದವನ್ನು 2010ರಲ್ಲಿ ಅಲಹಾಬಾದ್ ನ್ಯಾಯಾಲಯವು ತೀರ್ಪು ನೀಡಿ ಅಯೋಧ್ಯೆಯ ವಿವಾದಿತ 2.77 ಎಕರೆ ಪ್ರದೇಶವನ್ನು ಭೂಮಿಯನ್ನು ಸುನ್ನಿ ವಕ್ಫ್ ಮಂಡಳಿ, ನಿರ್ಮೊಹಿ ಅಖರ ಮತ್ತು ರಾಮ್ ಲಲ್ಲಾ ಮಧ್ಯೆ ಸಮನಾಗಿ ವಿಭಾಗಿಸುವಂತೆ ಆದೇಶ ನೀಡಿತ್ತು.

ಜೊತೆಗೆ ಹಿಂದು ಮತ್ತು ಮುಸ್ಲಿಂ ಎರಡೂ ಸಂಘಟನೆಗಳಿಗೆ ವಿವಾದವನ್ನು ಕೋರ್ಟ್’ನಿಂದ ಹೊರಗೆ ಬಗೆಹರಿಸಿಕೊಳ್ಳುವಂತೆ ಸಲಹೆ ನೀಡಿತ್ತು. ಇದು ಸಾಧ್ಯವಾಗದಿದ್ದರೆ ಮಧ್ಯಪ್ರವೇಶಿಸುವುದಾಗಿ ತಿಳಿಸಿತ್ತು. ಮುಸ್ಲಿಂ ಕೆಲವು ಅರ್ಜಿದಾರರ ಪರ ಕಪಿಲ್ ಸಿಬಾಲ್, ದುಷ್ಯಂತ್ ದಾವೆ ಹಾಗೂ ರಾಜೀವ್ ಧವನ್ ವಾದ ಮಂಡಿಸುತ್ತಿದ್ದಾರೆ. 

loader