ನವದೆಹಲಿ (ಜ.05): ತಮಿಳುನಾಡು ಸಿಎಂ ಜಯಲಲಿತಾ ಸಾವು ಪ್ರಕರಣ ಕುರಿತು ಸಿಬಿಐ ತನಿಖೆ ಆದೇಶಿಸಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.

ಕಳೆದ ತಿಂಗಳು ಅಪೊಲೋ ಅಸ್ಪತ್ರೆಯಲ್ಲಿ ಮೃತಪಟ್ಟಿದ್ದ ಜಯಾ ಅವರ ಸಾವಿನ ಬಗ್ಗೆ ಸಿಬಿಐ ತನಿಖೆ ನಡೆಸಬೇಕೆಂದು ಕೋರಿ ಎಐಎಡಿಎಂಕೆಯ ಶಶಿಕಲಾ ಪುಷ್ಪ ಸಾರ್ವಜನಿಕ ಹಿತಾಸಕ್ತಿ ಅರಜಿ ಸಲ್ಲಿಸಿದ್ದರು.

ಇದೇ ರೀತಿ ಅರ್ಜಿ ಸಲ್ಲಿಸಿದರೆ ದಂಡ ವಿಧಿಸಬೇಕಾಗುತ್ತೆ ಎಂದು ಸುಪ್ರೀಂ ಕೋರ್ಟ್ ಅರ್ಜಿದಾರರನ್ನು ಎಚ್ಚರಿಸಿದೆ.