2013ರಲ್ಲಿ ಧೋನಿ ವಿಷ್ಣುವಿನ ಅವತಾರದಲ್ಲಿ ಶೂ, ಮೊಬೈಲ್ ಫೋನ್ ಸೇರಿದಂತೆ ವಿವಿಧ ಜಾಹಿರಾತು ಉತ್ಫನ್ನಗಳನ್ನು ತನ್ನ ಕೈಯಲ್ಲಿ ಹಿಡಿದುಕೊಂಡ ಚಿತ್ರ ಮ್ಯಾಗ್'ಜಿನ್'ವೊಂದರ ಮುಖಪುಟದಲ್ಲಿ ಪ್ರಕಟಗೊಂಡಿತ್ತು.
ನವದೆಹಲಿ(ಏ.20): ಭಗವಂತನ ಅಪರವತಾರದಂತೆ ವಿಷ್ಣು ವೇಷಧಾರಿಯಾಗಿ ಕಂಗೊಳಿಸಿದ್ದ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಎಂ.ಎಸ್. ಧೋನಿ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಮೊಕದ್ದಮೆಯನ್ನು ಸರ್ವೋಚ್ಚ ನ್ಯಾಯಾಲಯ ವಜಾಗೊಳಿಸಿದೆ.
ಕ್ರಿಕೆಟಿಗ ಧೋನಿ ವಿಷ್ಣು ವೇಷಾಧಾರಿಯಾಗುವ ಮೂಲಕ ಧಾರ್ಮಿಕ ಭಾವನೆಗಳಿಗೆ ಧಕ್ಕೆಯನ್ನುಂಟು ಮಾಡಿದ್ದಾರೆ. ಅಲ್ಲದೇ ಧೋನಿ ತಾವು ರಾಯಭಾರಿಯಾಗಿರುವ ಉತ್ಪನ್ನಗಳನ್ನು ಕೈಯಲ್ಲಿ ಹಿಡಿದಿದ್ದರು ಎಂದು ಆರೋಪಿಸಿ ಜಾರ್ಖಂಡ್ ಮೂಲದ ಆಟಗಾರನ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿತ್ತು.
ಇಂದು ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ಈ ಪ್ರಕರಣ ಯಾವುದೇ ದುರುದ್ದೇಶಪೂರ್ವಕವಾಗಿ ನಡೆದಿಲ್ಲ ಎಂದು ಪ್ರಕರಣವನ್ನು ಕೈಬಿಟ್ಟಿದೆ. ಇದರ ಜತೆಗೆ ನಿಯತಕಾಲಿಕೆ ಸಂಪಾದಕರ ಮೇಲಿದ್ದ ಪ್ರಕರಣವನ್ನು ನ್ಯಾಯಾಲಯ ವಜಾ ಮಾಡಿದೆ.
2013ರಲ್ಲಿ ಧೋನಿ ವಿಷ್ಣುವಿನ ಅವತಾರದಲ್ಲಿ ಶೂ, ಮೊಬೈಲ್ ಫೋನ್ ಸೇರಿದಂತೆ ವಿವಿಧ ಜಾಹಿರಾತು ಉತ್ಫನ್ನಗಳನ್ನು ತನ್ನ ಕೈಯಲ್ಲಿ ಹಿಡಿದುಕೊಂಡ ಚಿತ್ರ ಮ್ಯಾಗ್'ಜಿನ್'ವೊಂದರ ಮುಖಪುಟದಲ್ಲಿ ಪ್ರಕಟಗೊಂಡಿತ್ತು. ಈ ಸಂಬಂಧ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟಾಗಿದೆ ಎನ್ನುವ ಆರೋಪದಡಿ ಆಂಧ್ರಪ್ರದೇಶದ ಅನಂತಪುರ ಕೋರ್ಟ್ ಜಾಮೀನುರಹಿತ ವಾರೆಂಟ್ ಹೊರಡಿಸಿತ್ತು.
