ಸುಪ್ರೀಂಕೋರ್ಟಿನಲ್ಲಿ ಸುಮಾರು 61 ಸಾವಿರ ಪ್ರಕರಣಗಳು ಬಾಕಿಯಿದ್ದು, ಹಳೆ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥಪಡಿಸಲಾಗುವುದು ಎಂದು ಮುಖ್ಯ ನ್ಯಾ. ಜೆ.ಎಸ್ ಖೇಹರ್ ಹೇಳಿದ್ದಾರೆ.

ನವದೆಹಲಿ (ಜ.19): ಸುಪ್ರೀಂಕೋರ್ಟಿನಲ್ಲಿ ಸುಮಾರು 61 ಸಾವಿರ ಪ್ರಕರಣಗಳು ಬಾಕಿಯಿದ್ದು, ಹಳೆ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥಪಡಿಸಲಾಗುವುದು ಎಂದು ಮುಖ್ಯ ನ್ಯಾ. ಜೆ.ಎಸ್ ಖೇಹರ್ ಹೇಳಿದ್ದಾರೆ.

ವ್ಯಾಜ್ಯಗಳ ಪಟ್ಟಿಯನ್ನು ನಿರ್ಮೂಲನೆ ಮಾಡುವುದಿಲ್ಲ. ನಾವು ತ್ವರಿತಗತಿಯಲ್ಲಿದ್ದೇವೆ. ಎಲ್ಲಾ ಪ್ರಕರಣಗಳನ್ನು ಶೀಘ್ರದಲ್ಲೇ ಇತ್ಯರ್ಥಪಡಿಸುತ್ತೇವೆ ಮುಖ್ಯ ನ್ಯಾ. ಭರವಸೆ ನೀಡಿದ್ದಾರೆ.

ಜೆ ಎಸ್ ಖೇಹರ್ ಮುಖ್ಯ ನ್ಯಾ. ಆಗಿ ಅಧಿಕಾರ ಸ್ವೀಕರಿಸಿದ 15 ದಿನಗಳಲ್ಲೇ ಸಾಮಾಜಿಕ ನ್ಯಾಯ ಪೀಠವನ್ನು ಪುನಶ್ಚೇತನಗೊಳಿಸಿದ್ದಾರೆ.