ಲೋಧಾ ಸಮಿತಿಯ ಶಿಫಾರಸ್ಸುಗಳನ್ನು ಜಾರಿಗೊಳಿಸದೇ ಇರುವುದರಿಂದ ಬಿಸಿಸಿಐಗೆ ಸುಪ್ರೀಂಕೋರ್ಟ್ ಶೋಕಾಸ್ ನೋಟೀಸ್ ನೀಡಿದ್ದು, ಶಿಫಾರಸ್ಸು ಜಾರಿಗೊಳಿಸದೇ ಇರಲು ಕಾರಣವೇನೆಂದು ಪ್ರಶ್ನಿಸಿದೆ.

ನವದೆಹಲಿ (ಆ.23): ಲೋಧಾ ಸಮಿತಿಯ ಶಿಫಾರಸ್ಸುಗಳನ್ನು ಜಾರಿಗೊಳಿಸದೇ ಇರುವುದರಿಂದ ಬಿಸಿಸಿಐಗೆ ಸುಪ್ರೀಂಕೋರ್ಟ್ ಶೋಕಾಸ್ ನೋಟೀಸ್ ನೀಡಿದ್ದು, ಶಿಫಾರಸ್ಸು ಜಾರಿಗೊಳಿಸದೇ ಇರಲು ಕಾರಣವೇನೆಂದು ಪ್ರಶ್ನಿಸಿದೆ.

ಲೋಧಾ ಸಮಿತಿ ಸೂಚನೆಗಳನ್ನು ಇದುವರೆಗೂ ಬಿಸಿಸಿಐ ಜಾರಿಗೊಳಿಸದೇ ಇರುವುದರ ಬಗ್ಗೆ ಸುಪ್ರೀಂಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. ನ್ಯಾ. ಎ ಎಂ ಕನ್ವಿಲ್’ಕರ್ ಮತ್ತು ನ್ಯಾ. ಡಿ ವೈ ಚಂದ್ರಚೂಡ್ ಒಳಗೊಂಡ ನ್ಯಾಯಪೀಠವು, ಬಿಸಿಸಿಐ ಕಾರ್ಯದರ್ಶಿ ಅಮಿತಾಬ್ ಚೌಧರಿಗೆ ಶೋಕಾಸ್ ನೋಟಿಸ್ ನೀಡಿದ್ದು, ಸೆ.19 ರೊಳಗೆ ವೈಯಕ್ತಿಕವಾಗಿ ನ್ಯಾಯಾಲಯಕ್ಕೆ ಹಾಜರಾಗಿ ಸಮಜಾಯಿಷಿ ನೀಡುವಂತೆ ಕೋರ್ಟ್ ಸೂಚಿಸಿದೆ.

ಹಿಂದಿನ ತೀರ್ಮಾನದಂತೆ ಕರಡು ಸಂವಿಧಾನವನ್ನು ರಚಿಸುವಂತೆ ಆಡಳಿತ ಸಮಿತಿಗೆ ಸೂಚಿಸಿದೆ.