ಬೆಂಗಳೂರು, ನ.01: ಕಾನೂನು ಹೋರಾಟದಲ್ಲಿ ರಾಮಚಂದ್ರಾಪುರ ಮಠಕ್ಕೆ ದೊಡ್ಡ ಗೆಲುವು ಸಿಕ್ಕಿದೆ. ಸರ್ಕಾರದ ಸುಪರ್ದಿಯಲ್ಲಿದ್ದ ಗೋಕರ್ಣ ದೇವಸ್ಥಾನವನ್ನ ರಾಮಚಂದ್ರಾಪುರ ಮಠದ ಸುಪರ್ದಿಗೆ ವಹಿಸಿ ಸುಪ್ರೀಂ ಕೋರ್ಟ್ ಆದೇಶ ನೀಡಿದೆ.

ಇದ್ರಿಂದ ರಾಜ್ಯ ಸರ್ಕಾರಕ್ಕೆ ಹಿನ್ನಡೆಯಾಗಿದೆ. ಸೋಮವಾರದೊಳಗೆ ದೇವಾಲಯವನ್ನ ಮಠಕ್ಕೆ ನೀಡುವಂತೆ ಸುಪ್ರೀಂ ಕೋರ್ಟ್ ಇಂದು (ಗುರುವಾರ) ಮಹತ್ವದ ಆದೇಶ ಹೊರಡಿಸಿದೆ.

 ಈ ಹಿಂದೆ ರಾಮಚಂದ್ರಪುರ ಮಠದಿಂದ ಹಿಂಪಡೆದು ಸರ್ಕಾರ ವಶಕ್ಕೆ ನೀಡಿ ಹೈಕೋರ್ಟ್ ಆದೇಶ ನೀಡಿತ್ತು.ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್ಮೆಟ್ಟಿಲೇರಿದ್ದ ರಾಮಚಂದ್ರಪುರ ಮಠಕ್ಕೆ ಈಗ ಜಯ ಸಿಕ್ಕಿದ್ದು, ರಾಜ್ಯ ಸರ್ಕಾರದ ವಶದಿಂದ ಗೋಕರ್ಣ ಮಹಾಬಲೇಶ್ವರ ದೇವಸ್ಥಾನವನ್ನ ರಾಮಚಂದ್ರಾಪುರ ಮಠ ತನ್ನ ಸುಪರ್ದಿಗೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಗೋಕರ್ಣ ದೇವಸ್ಥಾನ ಮಠಕ್ಕೆ ಹಸ್ತಾಂತರ ತಾತ್ಕಾಲಿಕ ಸ್ಥಗಿತ

ಬಿಎಸ್ ಯಡಿಯೂರಪ್ಪ ಸರ್ಕಾರ ಇದ್ದಾಗ ಗೋಕರ್ಣ ದೇಗುಲವನ್ನ ರಾಮಚಂದ್ರಪುರ ಮಠಕ್ಕೆ ನೀಡಲಾಗಿತ್ತು. ಬಳಿಕ ಹೈಕೋರ್ಟ್ ಗೋಕರ್ಣ ಮಹಾಬಲೇಶ್ವರ ದೇಗುಲವನ್ನ ರಾಜ್ಯ ಸರ್ಕಾರದ ವಶಕ್ಕೆ ನೀಡಿತ್ತು.

ಒಟ್ಟಿನಲ್ಲಿ ಗೋಕರ್ಣ ದೇಗುಲ ವಿವಾದದ ಕಾನೂನು ಹೋರಟದಲ್ಲಿ ರಾಮಚಂದ್ರಾಪುರ ಮಠ ಮೇಲುಗೈ ಸಾಧಿಸಿದಂತೂ ಸತ್ಯ.

"