ಚಿತ್ರದ ನಿರ್ಮಾಪಕ ಹಾಗೂ ನಿರ್ದೇಶಕರು ಆಗಿರುವ ಸಂಜಯ್ ಲೀಲಾ ಬನ್ಸಾಲಿ ಸಿಬಿಎಸ್'ಸಿ'ಯಿಂದ ಪ್ರಮಾಣಿತವಾಗಿ ಬರುವವರೆಗೂ ಇತರ ದೇಶಗಳಲ್ಲಿಯೂ ಬಿಡುಗಡೆ ಮಾಡುವುದಿಲ್ಲ ಎಂದು ಕೋರ್ಟ್'ಗೆ ತಿಳಿಸಿದ ಅವರು ಡಿಸೆಂಬರ್ 1 ರಂದು ಸಾಗರೋತ್ತರ ದೇಶಗಳಲ್ಲಿ ಬಿಡುಗಡೆಯಾಗುವ ಸುದ್ದಿಯನ್ನು ತಳ್ಳಿಹಾಕಿದರು.
ನವದೆಹಲಿ(ನ.28): ಬಾಲಿವುಡ್ ಸಿನಿಮಾ 'ಪದ್ಮಾವತಿ' ಚಿತ್ರತಂಡದ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಿ ಬೆದರಿಕೆ ಒಡ್ಡುತ್ತಿರುವ ಮುಖ್ಯಮಂತ್ರಿಗಳು, ಸಚಿವರುಗಳು ಹಾಗೂ ಹಲವು ರಾಜಕೀಯ ಮುಖಂಡರ ವಿರುದ್ಧ ಗರಂ ಆಗಿರುವ ಸುಪ್ರಿಂ ಕೋರ್ಟ್ ' ಟೀಕೆ ಮಾಡುವ ಇಂತಹ ವ್ಯಕ್ತಿಗಳು ಸಿಬಿಎಸ್'ಸಿಯಿಂದ ಪ್ರಮಾಣಪತ್ರ ಬರುವವರೆಗೂ ಶಾಂತ ರೀತಿಯಿಂದ ವರ್ತಿಸಬೇಕು ಎಂದು ಚಾಟಿ ಬೀಸಿದೆ.
ಜವಾಬ್ದಾರಿಯುತ ಸ್ಥಾನದಲ್ಲಿರುವವರು ಚಿತ್ರತಂಡದ ವಿರುದ್ಧ ಯಾವುದೇ ಅಧಿಕೃತ ಆಧಾರವಿಲ್ಲದೆ ಅರೋಪವನ್ನು ಹೊರಿಸುವುದು,ಸಮಾಜದಲ್ಲಿ ಅಶಾಂತಿ ಕದಡುವುದು ಕಾನೂನಿಗೆ ವಿರುದ್ಧವಾಗಿದೆ' ಎಂದು ಮುಖ್ಯನ್ಯಾಯಮೂರ್ತಿ ದೀಪಕ್ ಮಿಶ್ರಾ ಹಾಗೂ ನ್ಯಾಯಮೂರ್ತಿಗಳಾದ ಎ.ಎಂ ಕಾಣ್'ವೀಲ್ಕಕರ್, ಡಿ.ವೈ ಚಂದ್ರಚೂಡ್ ಅವರಿದ್ದ ನ್ಯಾಯಪೀಠ ತಿಳಿಸಿದೆ.
ಚಿತ್ರ ನಿರ್ಮಾಪಕ ಹಾಗೂ ನಿರ್ದೇಶಕರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೋಡಬೇಕೆಂದು ಸಲ್ಲಿಸಿದ್ದ ಅರ್ಜಿಯನ್ನು ಪರಿಶೀಲಿಸಿದ ಪೀಠ ಇದೊಂದು ನಿಷ್ಪ್ರಯೋಜಕ ಅರ್ಜಿ ಎಂದು ವಜಾಗೊಳಿಸಿತು. ಚಿತ್ರದ ನಿರ್ಮಾಪಕ ಹಾಗೂ ನಿರ್ದೇಶಕರು ಆಗಿರುವ ಸಂಜಯ್ ಲೀಲಾ ಬನ್ಸಾಲಿ ಸಿಬಿಎಸ್'ಸಿ'ಯಿಂದ ಪ್ರಮಾಣಿತವಾಗಿ ಬರುವವರೆಗೂ ಇತರ ದೇಶಗಳಲ್ಲಿಯೂ ಬಿಡುಗಡೆ ಮಾಡುವುದಿಲ್ಲ ಎಂದು ಕೋರ್ಟ್'ಗೆ ತಿಳಿಸಿದ ಅವರು ಡಿಸೆಂಬರ್ 1 ರಂದು ಸಾಗರೋತ್ತರ ದೇಶಗಳಲ್ಲಿ ಬಿಡುಗಡೆಯಾಗುವ ಸುದ್ದಿಯನ್ನು ತಳ್ಳಿಹಾಕಿದರು.
ಒಂದು ಸಮುದಾಯಕ್ಕೆ ಸಿನಿಮಾದಲ್ಲಿ ಅಗೌರವ ತೋರಲಾಗಿದೆ ಎಂದು ದೇಶದ ವಿವಿಧ ಕಡೆ ಪದ್ಮಾವತಿ ಚಿತ್ರತಂಡದ ವಿರುದ್ಧ ಪ್ರತಿಭಟನೆಗಳು ನಡೆದಿತ್ತು. ಕಲಾವಿದರ ವಿರುದ್ಧ ರಾಜಕೀಯ ನಾಯಕರು ಸೇರಿದಂತೆ ಹಲವರು ಬೆದರಿಕೆ ಒಡ್ಡಿದ್ದರು.
