Asianet Suvarna News Asianet Suvarna News

ಉರುಳಿದ ಮೈತ್ರಿ ಸರ್ಕಾರ: ಈ ಶಾಸಕರ ಅರ್ಜಿಗಿಲ್ಲ ಸುಪ್ರೀಂನಲ್ಲಿ ಕಿಮ್ಮತ್ತು

ವಿಶ್ವಾಸಮತ ಯಾಚನೆ ಪ್ರಕ್ರಿಯೆ ವಿಳಂಬ, ಇಬ್ಬರು ಶಾಸಕರ ಅರ್ಜಿ ವಿಚಾರಣೆ ಮತ್ತೆ ಮುಂದೂಡಿದ ಸುಪ್ರೀಂ| ವಿಚಾರಣೆ ಕೈಗೆತ್ತಿಕೊಂಡರೂ ಮಹತ್ವವಿಲ್ಲ| ವಿಶ್ವಾಸಮತ ಯಾಚನೆ ಪ್ರಕ್ರಿಯೆ ಪೂರ್ಣ, ಕುಮಾರಸ್ವಾಮಿ ಸರ್ಕಾರ ಪತನ

Supreme Court Adjourns Hearing Of Independent Karnataka MLAs Petition Again
Author
Bangalore, First Published Jul 24, 2019, 12:03 PM IST

ನವದೆಹಲಿ[ಜು. 24] ಕರ್ನಾಟಕ ವಿಧಾನಸಭೆಯಲ್ಲಿ ಸೋಮವಾರ ಸಂಜೆ 5 ಗಂಟೆಯೊಳಗೆ ಸ್ಪೀಕರ್ ವಿಶ್ವಾಸಮತ ಯಾಚನೆ ಪ್ರಕ್ರಿಯೆ ನಡೆಸಬೇಕು ಎಂದು ಸುಪ್ರೀಂ ಮೊರೆ ಹೋಗಿದ್ದ ಪಕ್ಷೇತರ ಶಾಸಕರಾದ ನಾಗೇಶ್ ಹಾಗೂ ಕೆಪಿಜೆಪಿಯ ಶಂಕರ್ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಮುಂದೂಡಲಾಗಿದೆ

ಮಂಗಳವಾರ ಸಂಜೆ ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರ ವಿಶ್ವಾಸಮತ ಯಾಚಿಸಿದ್ದು, ಈ ಅಗ್ನಿಪರೀಕ್ಷೆಯಲ್ಲಿ ವಿಫಲಗೊಂಡಿದ್ದ ಪರಿಣಾಮ ಸರ್ಕಾರ ಪತನಗೊಂಡಿದೆ. ಹೀಗಾಗಿ ಒಂದು ವೇಳೆ ಪಕ್ಷೇತರ ಶಾಸಕ ಎನ್‌ ನಾಗೇಶ್ ಹಾಗೂ ಕೆಪಿಜೆಪಿಯ ಆರ್‌ ಶಂಕರ್ ಸಲ್ಲಿಸಿರುವ ಅರ್ಜಿ ವಿಚಾರಣೆಗೆ ಬಂದರೂ ಮಹತ್ವ ಕಳೆದುಕೊಳ್ಳಲಿದೆ.

ಕರ್ನಾಟಕ ರಾಜಕೀಯದಲ್ಲಿ ಹೈಡ್ರಾಮಾ: ಕಳೆದ ಮೂರು ವಾರಗಳಿಂದ ಏನೇನಾಯ್ತು?

ಇದಕ್ಕೂ ಮೊದಲು ಅಂದರೆ ಮಂಗಳವಾರ ಮುಖ್ಯ ನ್ಯಾಯಮೂರ್ತಿ ರಂಜನ್ ಗೋಗೊಯ್ ನೇತೃತ್ವದ ಪೀಠ ಅರ್ಜಿ ವಿಚಾರಣೆ ಕೈಗೆತ್ತಿಕೊಂಡಿತ್ತು. ಈ ವೇಳೆ ಪಕ್ಷೇತರ ಶಾಸಕರಾದ ನಾಗೇಶ್‌ ಹಾಗೂ ಕೆಪಿಜೆಪಿಯ ಶಂಕರ್‌ ಪರ ವಕೀಲ ಮುಕುಲ್ ರೋಹ್ಟಗಿ ಹಾಗೂ ಸ್ಪೀಕರ್ ಪರವಾಗಿ ಅಭಿಷೇಕ್ ಮನು ಸಿಂಘ್ವಿಯವರು ಸುಪ್ರೀಂನಲ್ಲಿ ವಾದ-ಪ್ರತಿವಾದ ಮಂಡಿಸಿದ್ದರು. ಅಲ್ಲದೇ ಮಂಗಳವಾರ ಸಂಜೆ 6 ಗಂಟೆಯೊಳಗಾಗಿ ವಿಶ್ವಾಸಮತಯಾಚನೆ ಪ್ರಕ್ರಿಯೆ ಮುಗಿಸುವುದಾಗಿ ಸ್ಪೀಕರ್ ಪರ ವಕೀಲರಾದ ಅಭಿಷೇಕ್ ಮನು ಸಿಂಘ್ವಿ  ಮನವಿ ಮಾಡಿಕೊಂಡಿದ್ದರು.

ಬಳಿಕ ಸ್ಪೀಕರ್ ಕೊಟ್ಟ ಮಾತಿನಂತೆ ವಿಶ್ವಾಸಮತ ಯಾಚನೆ ಪ್ರಕ್ರಿಯೆ ನಡೆಸಿದ್ದರು. ಈ ಅಗ್ನಿಪರೀಕ್ಷೆಯಲ್ಲಿ ಎಚ್. ಡಿ. ಕುಮಾರಸ್ವಾಮಿ ಕೇವಲ 5 ಸದಸ್ಯರ ಮತಗಳ ಕೊರತೆಯಿಂದ ಫೇಲಾಗಿದ್ದರು. ಇದರ ಬೆನ್ನಲ್ಲೇ ವಿಧಾನಸಭೆಯಿಂದ ನಿರ್ಗಮಿಸಿದ್ದ ಕುಮಾರಸ್ವಾಮಿ ರಾಜ್ಯಪಾಲರ ಬಳಿ ತೆರಳಿ ತಮ್ಮ ರಾಜೀನಾಮೆ ಪತ್ರ ಸಲ್ಲಿಸಿದ್ದರು. ಈ ರಾಜೀನಾಮೆ ಪತ್ರ ಸ್ವೀಕರಿಸಿದ್ದ ರಾಜ್ಯಪಾಲ ವಜುಭಾಯಿವಾಲಾ ಮತ್ತೊಬ್ಬರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುವವರೆಗೂ ಕುಮಾರಸ್ವಾಮಿಯನ್ನು ಕೇರ್ ಟೇಕರ್ ಚೀಫ್ ಮಿನಿಸ್ಟರ್ ಆಗಿ ನೇಮಿಸಿದ್ದಾರೆ.

Follow Us:
Download App:
  • android
  • ios