ಬಾಬಾ ರಾಮ್ ರಹೀಮ್ ಅವರು ಸಮಾಜಕ್ಕೆ ಒಳ್ಳೆಯದು ಮಾಡುವುದನ್ನಷ್ಟೇ ಹೇಳಿಕೊಡುತ್ತಾರೆ. ಅವರ ಜನಪ್ರಿಯತೆಯನ್ನು ಸಹಿಸದೇ ಅವರನ್ನು ಹತ್ತಿಕ್ಕಲು ಸಂಚು ರೂಪಿಸಲಾಗಿದೆ ಎಂದು ಒಬ್ಬ ಬೆಂಬಲಿಗರು ಹೇಳಿದ್ದಾರೆ. ಸುವರ್ಣನ್ಯೂಸ್ ಜೊತೆ ಮಾತನಾಡಿದ ಆ ವ್ಯಕ್ತಿ, ತಮಗೆ ಕೋರ್ಟ್ ತೀರ್ಪು ಬರುವ ಮುಂಚೆ ಕಾನೂನಿನ ಮೇಲೆ ವಿಶ್ವಾಸವಿತ್ತು. ಆದರೀಗ ನ್ಯಾಯಾಲಯ ಕೂಡ ಭ್ರಷ್ಟವಾಗಿದೆ ಎಂದನಿಸುತ್ತೆ ಎಂದವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು(ಆ. 25): ಬಾಬಾ ಗುರ್ಮೀತ್ ರಾಮ್ ರಹೀಮ್ ಸಿಂಗ್ ಅವರಿಗೆ ನ್ಯಾಯಾಲಯದಿಂದ ಮೋಸ ಆಗಿದೆ ಎಂದು ಬೆಂಗಳೂರಿನಲ್ಲಿರುವ ಅವರ ಬೆಂಬಲಿಗರು ಅಭಿಪ್ರಾಯಪಟ್ಟಿದ್ದಾರೆ. ರಾಮ್ ರಹೀಮ್ ಸಿಂಗ್ ಯಾವುದೇ ತಪ್ಪು ಮಾಡಿಲ್ಲ. ಅವರ ವಿರುದ್ಧ ದೊಡ್ಡ ಷಡ್ಯಂತ್ರ ನಡೆದಿದೆ ಎಂದು ಅವರ ಅನುಯಾಯಿಗಳು ಆರೋಪಿಸಿದ್ದಾರೆ. ವಿಶ್ವಾದ್ಯಂತವಿರುವ ದೇರಾ ಸಚ್ಚಾ ಸೌಧಾ ಆಶ್ರಮ ಬೆಂಗಳೂರಿನ 8ನೇ ಮೈಲಿಯಲ್ಲೂ ಇದೆ. ನಗರದ ಈ ಆಶ್ರಮದಲ್ಲಿ ಬಾಬಾ ಅನುಯಾಯಿಗಳು ಶಾಂತ ರೀತಿಯಲ್ಲೇ ಬೆಳಗ್ಗೆಯಿಂದಲೂ ಜಯಾಯಿಸಿದ್ದರು. ಬಾಬಾ ಗುರ್ಮೀತ್ ಅತ್ಯಾಚಾರಿ ಎಂದು ಕೋರ್ಟ್ ಕೊಟ್ಟ ತೀರ್ಪು ತಪ್ಪು ಎಂಬುದು ಇಲ್ಲಿಯ ಎಲ್ಲಾ ಅನುಯಾಯಿಗಳ ಒಮ್ಮತದ ಅಭಿಪ್ರಾಯ.
ಬಾಬಾ ರಾಮ್ ರಹೀಮ್ ಅವರು ಸಮಾಜಕ್ಕೆ ಒಳ್ಳೆಯದು ಮಾಡುವುದನ್ನಷ್ಟೇ ಹೇಳಿಕೊಡುತ್ತಾರೆ. ಅವರ ಜನಪ್ರಿಯತೆಯನ್ನು ಸಹಿಸದೇ ಅವರನ್ನು ಹತ್ತಿಕ್ಕಲು ಸಂಚು ರೂಪಿಸಲಾಗಿದೆ ಎಂದು ಒಬ್ಬ ಬೆಂಬಲಿಗರು ಹೇಳಿದ್ದಾರೆ. ಸುವರ್ಣನ್ಯೂಸ್ ಜೊತೆ ಮಾತನಾಡಿದ ಆ ವ್ಯಕ್ತಿ, ತಮಗೆ ಕೋರ್ಟ್ ತೀರ್ಪು ಬರುವ ಮುಂಚೆ ಕಾನೂನಿನ ಮೇಲೆ ವಿಶ್ವಾಸವಿತ್ತು. ಆದರೀಗ ನ್ಯಾಯಾಲಯ ಕೂಡ ಭ್ರಷ್ಟವಾಗಿದೆ ಎಂದನಿಸುತ್ತೆ ಎಂದವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಹಿಳಾ ಅನುಯಾಯಿಯೊಬ್ಬರು ಮಾತನಾಡಿ, ತಮ್ಮ ಬಾಬಾರನ್ನು ಬೇಕಂತಲೇ ಸಿಲುಕಿಸಲಾಗಿದೆ ಎಂದು ಖೇದ ವ್ಯಕ್ತಪಡಿಸಿದ್ದಾರೆ. ಸಿಬಿಐ ಒಂದು ಭ್ರಷ್ಟ ಸಂಸ್ಥೆಯಾಗಿದ್ದು, ಈ ಹಿಂದೆಯೂ ಅದು ರುಜುವಾತಾಗಿದೆ ಎಂದವರು ಆರೋಪಿಸಿದ್ದಾರೆ.