ನವದೆಹಲಿ[ಜು.08]:  ಟಿಕ್ ಟಾಕ್ ಆ್ಯಪ್ ಅದೆಷ್ಟೇ ಟೀಕೆಗೆ ಗುರಿಯಾಗಿದ್ದರೂ, ಇಲ್ಲಿನ ಕೆಲ ವಿಡಿಯೋಗಳು ವೈರಲ್ ಆಗುವುದರೊಂದಿಗೆ ಹಲವರ ಮನಗೆಲ್ಲುತ್ತವೆ. ಇದೀಗ ಓರ್ವ ಅಜ್ಜಿ ಹಾಗೂ ಮೊಮ್ಮಗನ ಕ್ಯೂಟ್ ವಿಡಿಯೋಗಳು ಭಾರೀ ವೈರಲ್ ಆಗುತ್ತಿವೆ. ಮೊಮ್ಮಗನಿಗೆ ಫುಲ್ ಸಪೋರ್ಟ್ ನೀಡಿರುವ ಈ ಅಜ್ಜಿಯ ವಿಡಿಯೋಗಳು ಟ್ವಿಟರ್ ನಲ್ಲೂ ಸದ್ದು ಮಾಡುತ್ತಿವೆ. 

ಟ್ವಿಟರ್ ಬಳಕೆದಾರರೊಬ್ಬರು ಅಜ್ಜಿ ಹಾಗೂ ಮೊಮ್ಮಗನ ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುತ್ತಾ 'ಟಿಕ್ ಟಾಕ್ ನ ಕೆಲ ವಿಡಿಯೋಗಳು ಸೂಪರ್ ಕ್ಯೂಟ್ ಆಗಿರುತ್ತವೆ' ಎಂದಿದ್ದಾರೆ. 

ಒಟ್ಟಾರೆಯಾಗಿ ಈ ಅಜ್ಜಿಯ ಕ್ಯೂಟ್‌ನೆಸ್, ಎಕ್ಸ್‌ಪ್ರೆಷನ್ಸ್‌ ಸ್ಟಾರ್ ನಟಿಯರ ನಟನೆಯನ್ನೂ ಮೀರಿಸುವಂತಿದೆ ಎಂದರೆ ತಪ್ಪಾಗುವುದಿಲ್ಲ.