ಹಗಲಿರುಳು ಸಮಾಜ ಕಾಯುವ ಪೊಲೀಸರಿಗೆ ಈಗ ಸಮಸ್ಯೆ ಎದುರಾಗಿದೆ. ಪೊಲೀಸರು ಅನಾರೋಗ್ಯಕ್ಕೆ ತುತ್ತಾದರೆ ಬೆಂಗಳೂರಿನ ಯಾವುದೇ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡವುದಿಲ್ಲವಂತೆ! ಕಾರಣ ಸರ್ಕಾರದ ಭ್ರಷ್ಟ ಅಧಿಕಾರಿಗಳ ನಿರ್ಲಕ್ಷ್ಯ. ಅಷ್ಟಕ್ಕೂ, ರಾಜ್ಯದ ರಕ್ಷಕರಿಗೆ,ಗಂಡಾಂತರ ಎದುರಾಗಿರೋದು ಯಾಕೆ..? ಖಾಸಗಿ ಆಸ್ಪತ್ರೆಗಳು ಸರ್ಕಾರದ ಮೇಲೆ ಮುನಿಸಿಕೊಂಡಿರೋದು ಯಾಕೆ..?
ಬೆಂಗಳೂರು (ಸೆ.22): ಹಗಲಿರುಳು ಸಮಾಜ ಕಾಯುವ ಪೊಲೀಸರಿಗೆ ಈಗ ಸಮಸ್ಯೆ ಎದುರಾಗಿದೆ. ಪೊಲೀಸರು ಅನಾರೋಗ್ಯಕ್ಕೆ ತುತ್ತಾದರೆ ಬೆಂಗಳೂರಿನ ಯಾವುದೇ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡವುದಿಲ್ಲವಂತೆ! ಕಾರಣ ಸರ್ಕಾರದ ಭ್ರಷ್ಟ ಅಧಿಕಾರಿಗಳ ನಿರ್ಲಕ್ಷ್ಯ. ಅಷ್ಟಕ್ಕೂ, ರಾಜ್ಯದ ರಕ್ಷಕರಿಗೆ,ಗಂಡಾಂತರ ಎದುರಾಗಿರೋದು ಯಾಕೆ..? ಖಾಸಗಿ ಆಸ್ಪತ್ರೆಗಳು ಸರ್ಕಾರದ ಮೇಲೆ ಮುನಿಸಿಕೊಂಡಿರೋದು ಯಾಕೆ..?
ಆಡಳಿತರೂಢಾ ಸರ್ಕಾರ ವರ್ಷಕ್ಕೆ ಒಂದರಂತೆ ಯೋಜನೆಗಳನ್ನ ಜಾರಿ ಮಾಡುತ್ತಲೇ ಬಂದಿದೆ. ಅದರಂತೆ ರಾಜ್ಯದ ಪೊಲೀಸ್ ಸಿಬ್ಬಂದಿಗಳಿಗಾಗಿ 'ಆರೋಗ್ಯ ಭಾಗ್ಯ' ಎಂಬ ಯೋಜನೆ ಜಾರಿ ಮಾಡಿತ್ತು. ಪೊಲೀಸ್ ಸಿಬ್ಬಂದಿಗಳಿಗೆ ಉಚಿತ ಚಿಕಿತ್ಸೆ ಪಡೆದುಕೊಳ್ಳಲು ಆರಂಭವಾದ ಈ ಯೋಜನೆ , ಈಗ ಕಣ್ಮರೆಯಾಗುವ ಅಂಚಿನಲ್ಲಿದೆ. ಸರಿಯಾಗಿ ಖಾಸಗಿ ಆಸ್ಪತ್ರೆಗಳಿಗೆ ಸರ್ಕಾರ ಬಿಲ್ ಕಟ್ಟದ ಕಾರಣ ಆರೋಗ್ಯ ಭಾಗ್ಯದಡಿ ಬರುವ ರೋಗಿಗಳಿಗೆ ಖಾಸಗಿ ಆಸ್ಪತ್ರೆಯವರು ಪ್ರವೇಶ ನೀಡುತ್ತಿಲ್ಲ. ಆಸ್ಪತ್ರೆಯ ನೋಟೀಸ್ ಬೋರ್ಡ್ಗಳಲ್ಲೇ ಆರೋಗ್ಯ ಭಾಗ್ಯ ಯೋಜನೆ ಸ್ಥಗಿತ ಮಾಡಲಾಗಿದೆ ಎಂದು ಹಾಕಲಾಗಿದೆ.
ಸುವರ್ಣನ್ಯೂಸ್ ನಡೆಸಿದ ರಹಸ್ಯ ಕಾರ್ಯಾಚರಣೆಯಲ್ಲಿ ಪೊಲೀಸರ ಆರೋಗ್ಯ ಭಾಗ್ಯದ ಅಸಲಿಯತ್ತು ಹೊರಬಿದ್ದಿದೆ. ಬೆಂಗಳೂರಿನ ಸೆಂಟ್ ಫಿಲೋಮಿನಾ ಆಸ್ಪತ್ರೆ, ಎಚ್ಸಿಜಿ ಕ್ಯಾನ್ಸರ್ ಆಸ್ಪತ್ರೆ, ಹೆಬ್ಬಾಳದ ಅಸ್ಟರ್ ಸಿಎಂಐ ಆಸ್ಪತ್ರೆಯಲ್ಲಿ ಆರೋಗ್ಯ ಭಾಗ್ಯ ಯೋಜನೆಯಡಿಯಲ್ಲಿ, ಯಾವುದೇ ಪೊಲೀಸ್ರಿಗೆ ಚಿಕಿತ್ಸೆ ನೀಡುತ್ತಿಲ್ಲ. ಕಳೆದ ಎರಡು ವರ್ಷಗಳಿಂದ ಆಸ್ಪತ್ರೆಗಳಿಗೆ ಕಟ್ಟಬೇಕಿದ ಹಣವನ್ನ ಸರ್ಕಾರದ ಕಟ್ಟದೆ ಇರುವ ಕಾರಣ, ಆಸ್ಪತ್ರೆಗಳಲ್ಲಿ ಆರೋಗ್ಯ ಭಾಗ್ಯ ಕಾರ್ಡ್ ಹೊಂದಿದ ಪೊಲೀಸ್ರಿಗೆ ಚಿಕಿತ್ಸೆ ಸಿಗುತ್ತಿಲ್ಲ.
ಭ್ರಷ್ಟಾಚರವನ್ನ ಕಂಡುಹಿಡಿಯೋ ಇಲಾಖೆಯಲ್ಲೇ ಭ್ರಷ್ಟಾಚಾರ ನಡೆಯುತ್ತಿದೆ. ಆಸ್ಪತ್ರೆಗಳಿಗೆ ಕಟ್ಟಬೇಕಿರುವ ಹಣವನ್ನ ಕಟ್ಟದೆ , ಭ್ರಷ್ಟ ಅಧಿಕಾರಿಗಳು ಪೊಲೀಸರ ಜೀವದ ಜೊತೆ ಆಟವಾಡುತ್ತಿದ್ದಾರೆ. ಈಗಲಾದ್ರೂ ಗೃಹ ಸಚಿವರು ಎಚ್ಚೆತ್ತುಕೊಂಡು ತಮ್ಮ ಇಲಾಖೆಯ ಭ್ರಷ್ಟಾಚಾರವನ್ನ ಸರಿಪಡಿಸುವ ಅಗತ್ಯವಿದೆ.
