ನಗರದ ಮಾನ್ಯತಾ ಟೆಕ್‌ಪಾರ್ಕ್ನಲ್ಲಿ ಸನ್ನಿ ಲಿಯೋನ್‌ ನೃತ್ಯ ಕಾರ್ಯಕ್ರಮಕ್ಕೆ ಅನುಮತಿ ನೀಡುವಂತೆ ಟೈಮ್ಸ್‌ ಕ್ರಿಯೇಷನ್‌ ಸಂಸ್ಥೆ ಮನವಿ ಮಾಡಿದ್ದು ಸೂಕ್ತ ದಾಖಲೆ ನೀಡುವಂತೆ ಈಶಾನ್ಯ ವಿಭಾಗದ ಡಿಸಿಪಿ ಕಲಾ ಕೃಷ್ಣಸ್ವಾಮಿ ಸೂಚಿಸಿದ್ದಾರೆ.

ಬೆಂಗಳೂರು : ಬಾಲಿವುಡ್‌ ಖ್ಯಾತ ನಟಿ ಸನ್ನಿ ಲಿಯೋನ್‌ ನೃತ್ಯ ಕಾರ್ಯಕ್ರಮದ ಅನುಮತಿ ಸಲುವಾಗಿ ಸೂಕ್ತ ದಾಖಲೆಗಳನ್ನು ಸಲ್ಲಿಸುವಂತೆ ಆಯೋಜಕರಿಗೆ ಈಶಾನ್ಯ ವಿಭಾಗದ ಡಿಸಿಪಿ ಕಲಾ ಕೃಷ್ಣಸ್ವಾಮಿ ಸೂಚಿಸಿದ್ದಾರೆ.

ನಗರದ ಮಾನ್ಯತಾ ಟೆಕ್‌ಪಾರ್ಕ್ನಲ್ಲಿ ಸನ್ನಿ ಲಿಯೋನ್‌ ನೃತ್ಯ ಕಾರ್ಯಕ್ರಮಕ್ಕೆ ಅನುಮತಿ ನೀಡುವಂತೆ ಟೈಮ್ಸ್‌ ಕ್ರಿಯೇಷನ್‌ ಸಂಸ್ಥೆ ಮನವಿ ಮಾಡಿತು. ಆದರೆ ಈ ಕಾರ್ಯಕ್ರಮದ ರೂಪುರೇಷೆಗಳ ಕುರಿತು ಸಮಗ್ರ ಮಾಹಿತಿ ಹಾಗೂ ದಾಖಲೆ ಸಲ್ಲಿಸಿದ ಬಳಿಕ ಅನುಮತಿ ನೀಡುವುದಾಗಿ ಹೇಳಿದ್ದೇವೆ ಎಂದು ಡಿಸಿಪಿ ಕಲಾ ಕೃಷ್ಣಸ್ವಾಮಿ ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.

ನ.5ರಂದು ಹೆಬ್ಬಾಳದ ಸಮೀಪದ ಮಾನ್ಯತಾ ಟೆಕ್‌ ಪಾರ್ಕ್ನಲ್ಲಿ ಸನ್ನಿ ಲಿಯೋನ್‌ ನೈಟ್ಸ್‌ ಹೆಸರಿನಲ್ಲಿ ಟೈಮ್ಸ್‌ ಕ್ರಿಯೇಷನ್ಸ್‌ ಕಾರ್ಯಕ್ರಮ ಆಯೋಜಿಸಿದೆ. ಈ ಸಂಬಂಧ ಈಗಾಗಲೇ ಆಯೋಜಕರು, ಆನ್‌ಲೈನ್‌ನಲ್ಲಿ ಟಿಕೆಟ್‌ ಸಹ ಮಾರಾಟ ಮಾಡಿದ್ದು, ನಗರದ ವಿವಿಧೆಡೆ ಪ್ರಚಾರ ಸಹ ನಡೆಸುತ್ತಿದ್ದಾರೆ. 

2018ರ ಹೊಸ ವರ್ಷಾಚರಣೆಗೆ ಸಹ ಸನ್ನಿ ಲಿಯೋನ್‌ ನೃತ್ಯ ಪ್ರದರ್ಶನಕ್ಕೆ ಟೈಮ್ಸ್‌ ಕ್ರಿಯೇಷನ್ಸ್‌ ತಯಾರಿ ನಡೆಸಿತ್ತು. ಆದರೆ ಕನ್ನಡಪರ ಸಂಘಟನೆಗಳ ತೀವ್ರ ವಿರೋಧದ ಬಳಿಕ ಪೊಲೀಸರು, ಸನ್ನಿ ಕಾರ್ಯಕ್ರಮಕ್ಕೆ ಅನುಮತಿ ನಿರಾಕರಿಸಿದ್ದರು.