ನಂಜನಗೂಡು ಕ್ಷೇತ್ರದಿಂದ ಸಚಿವ ಹೆಚ್.ಸಿ.ಮಹದೇವಪ್ಪ ಪುತ್ರನ ರಾಜಕೀಯ ಪ್ರವೇಶ ಆಗುವ ಹಿನ್ನೆಲೆಯಲ್ಲಿ ಟಿ.ನರಸೀಪುರ ತಾಲೂಕಿನ ಕಾರ್ಯಕರ್ತರಿಗೆ ಭರ್ಜರಿ ಬಾಡೂಟ ಉಣಬಡಿಸಿದ್ದಾರೆ.
ಮೈಸೂರು (ನ.01): ನಂಜನಗೂಡು ಉಪಚುನಾವಣೆಗೆ ಸಚಿವ ಮಹದೇವಪ್ಪ ಪುತ್ರನ ಭರ್ಜರಿ ಸಿದ್ಧತೆ ನಡೆಯುತ್ತಿದೆ.
ಸಚಿವರ ಪುತ್ರ ಸುನೀಲ್ ಬೋಸ್ 5 ಸಾವಿರ ಕಾರ್ಯಕರ್ತರಿಗೆ ಬಾಡೂಟ ಆಯೋಜಿಸಿದ್ದರು.
ನಂಜನಗೂಡು ಕ್ಷೇತ್ರದಿಂದ ಸಚಿವ ಹೆಚ್.ಸಿ.ಮಹದೇವಪ್ಪ ಪುತ್ರನ ರಾಜಕೀಯ ಪ್ರವೇಶ ಆಗುವ ಹಿನ್ನೆಲೆಯಲ್ಲಿ ಟಿ.ನರಸೀಪುರ ತಾಲೂಕಿನ ಕಾರ್ಯಕರ್ತರಿಗೆ ಭರ್ಜರಿ ಬಾಡೂಟ ಉಣಬಡಿಸಿದ್ದಾರೆ.
ಸುನೀಲ್ ಬೋಸ್ ನಂಜನಗೂಡು ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಂದು ಬಿಂಬಿತವಾಗಿರುವ ಹಿನ್ನೆಲೆಯಲ್ಲಿ ಕಣಕ್ಕಿಳಿಯಲು ಈಗಿನಿಂದಲೇ ಸಿದ್ಧತೆ ನಡೆಯುತ್ತಿದ್ದು , ಕಾರ್ಯಕರ್ತರನ್ನು ಸೆಳೆಯಲು ಈ ಬಾಡೂಟ ಆಯೋಜಿಸಿದ್ದರು.