ಇದೇ ವಾರ ಸುಂದರ್ ಪಿಚೈ ಅತೀ ಹೆಚ್ಚು ಶ್ರೀಮಂತರಾಗಲಿದ್ದಾರೆ!

Sundar Pichai Biggest Day
Highlights

ಜಗತ್ತಿನ ಅತಿದೊಡ್ಡ ಇಂಟರ್ನೆಟ್ ಸರ್ಚ್ ಎಂಜಿನ್ ಗೂಗಲ್‌ನ ಭಾರತೀಯ ಮೂಲದ ಸಿಇಒ ಸುಂದರ್ ಪಿಚೈ ಈ ವಾರ 2500 ಕೋಟಿ ರು.ಗಳಷ್ಟು ಹೆಚ್ಚು ಶ್ರೀಮಂತರಾಗಲಿದ್ದಾರೆ. ಗೂಗಲ್‌ನ ಮಾತೃ ಕಂಪನಿ ಅಲ್ಫಾಬೆಟ್ ಇಂಕ್‌ನ ಉಪಾಧ್ಯಕ್ಷರೂ ಆಗಿರುವ ಪಿಚೈಗೆ ಆ ಕಂಪನಿಯ 3,53,939 ಷೇರುಗಳು ಈ ಬುಧ ವಾರ ಸಿಗಲಿದ್ದು, ಅವುಗಳ ಮೌಲ್ಯ 380 ದಶಲಕ್ಷ ಡಾಲರ್ (ಸುಮಾರು 2500 ಕೋಟಿ ರು.) ಆಗಿದೆ.

ವಾಷಿಂಗ್ಟನ್ (ಏ. 24): ಜಗತ್ತಿನ ಅತಿದೊಡ್ಡ ಇಂಟರ್ನೆಟ್ ಸರ್ಚ್ ಎಂಜಿನ್ ಗೂಗಲ್‌ನ ಭಾರತೀಯ ಮೂಲದ ಸಿಇಒ ಸುಂದರ್ ಪಿಚೈ ಈ ವಾರ 2500 ಕೋಟಿ ರು.ಗಳಷ್ಟು ಹೆಚ್ಚು ಶ್ರೀಮಂತರಾಗಲಿದ್ದಾರೆ. ಗೂಗಲ್‌ನ ಮಾತೃ ಕಂಪನಿ ಅಲ್ಫಾಬೆಟ್ ಇಂಕ್‌ನ ಉಪಾಧ್ಯಕ್ಷರೂ ಆಗಿರುವ ಪಿಚೈಗೆ ಆ ಕಂಪನಿಯ 3,53,939 ಷೇರುಗಳು ಈ ಬುಧವಾರ  ಸಿಗಲಿದ್ದು, ಅವುಗಳ ಮೌಲ್ಯ 380 ದಶಲಕ್ಷ ಡಾಲರ್ (ಸುಮಾರು 2500 ಕೋಟಿ ರು.) ಆಗಿದೆ.

ಪಿಚೈ 2015 ರಲ್ಲಿ ಗೂಗಲ್ ಕಂಪನಿ ಸಿಇಒ ಆಗುವ ಮುನ್ನ  ಅವರನ್ನು ಗೂಗಲ್‌ನ ಮಾತೃ ಕಂಪನಿಯಾದ ಅಲ್ಫಾಬೆಟ್‌ಗೆ ಉಪಾಧ್ಯಕ್ಷರನ್ನಾಗಿ ಮಾಡಲಾಗಿತ್ತು. ಆಗ ಅವರಿಗೆ ಅಲ್ಫಾಬೆಟ್‌ನ  3,53,939 ನಿರ್ಬಂಧಿತ ಷೇರು ದೊರೆತಿತ್ತು. ಆ ಷೇರುಗಳ ಮೇಲಿದ್ದ ನಿರ್ಬಂಧ ಈ ಬುಧವಾರ ಮುಕ್ತಾಯವಾಗಲಿದ್ದು, ಅಷ್ಟೂ ಷೇರುಗಳು ಸುಂದರ್ ಪಿಚೈ ಸುಪರ್ದಿಗೆ ಬರಲಿವೆ. ಸುಂದರ್ ಪಿಚೈಗೆ ದೊರೆತಿದ್ದಕ್ಕಿಂತ ಹಲವು ಪಟ್ಟು ಹೆಚ್ಚು ಮೊತ್ತದ ಷೇರನ್ನು ಇದೇ ರೀತಿ ಫೇಸ್‌ಬುಕ್ ಸಿಇಒ ಮಾರ್ಕ್ ಜುಕರ್‌ಬರ್ಗ್ ಸೇರಿದಂತೆ ಮುಂತಾದವರು ಕೆಲ ವರ್ಷಗಳ ಹಿಂದೆ ಪಡೆದಿದ್ದಾರೆ. 

loader