ಕಾಬೂಲ್(ಸೆ.17): ಅಫ್ಘಾನಿಸ್ತಾನದ ಅಧ್ಯಕ್ಷ ಅಶ್ರಫ್ ಘನಿ ಚುನಾವಣಾ ರ‍್ಯಾಲಿ ಮೇಲೆ ಯಗ್ರರು ಆತ್ಮಹತ್ಯಾ ಬಾಂಬ್ ದಾಳಿ ನಡೆಸಿದ್ದು, ಸ್ಫೋಟದಲ್ಲಿ ಕನಿಷ್ಟ 24 ಜನ ಮೃತಪಟ್ಟಿದ್ದು 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಉತ್ತರ ಅಫ್ಘಾನಿಸ್ತಾನದ ಪರ್ವಾನ್ ಪ್ರಾಂತ್ಯದಲ್ಲಿ ಅಶ್ರಫ್ ಘನಿ ಚುನಾವಣಾ ಭಾಷಣ ಮಾಡುತ್ತಿದ್ದರು. ಈ ವೇಳೆ ಬೈಕ್'ನಲ್ಲಿ ಬಂದ ಆತ್ಮಾಹುತಿ ಬಾಂಬ್ ದಾಳಿಕೋರರು ಜನಸಂದಣಿ ಮಧ್ಯೆ ತಮ್ಮನ್ನು ತಾವು ಸ್ಫೋಟಿಸಿಕೊಂಡಿದ್ದಾರೆ.

ಇನ್ನು ಬಾಂಬ್ ಸ್ಫೋಟಗೊಂಡಾಗ ಅಶ್ರಫ್ ಘನಿ ಸನಿಹದಲ್ಲೇ ಇದ್ದರು ಎಂದು ಹೇಳಲಾಗಿದ್ದು, ಅದೃಷ್ಟವಶಾತ ಅವರಿಗೆ ಯಾವುದೇ ಅಪಾಯ ಸಂಭವಿಸಿಲ್ಲ ಎಂದು ಮೂಲಗಳು ತಿಳಿಸಿವೆ.

ಅಫ್ಘಾನಿಸ್ತಾನದಲ್ಲಿ ಈ ತಿಂಗಳ ಅಂತ್ಯಕ್ಕೆ ಅಧ್ಯಕ್ಷೀಯ ಚುನಾವಣೆ ನಡೆಯಲಿದ್ದು, ಪ್ರಜಾಪ್ರಭುತ್ವ ಮಾದರಿಯ ಚುನಾವಣೆಗೆ ತಡೆಯೊಡ್ಡಲು ಉಗ್ರವಾದಿಗಳು ಪ್ರಯತ್ನ ನಡೆಸಿದ್ದಾರೆ.