ಅಂದಾಜು 25 ಕೋಟಿ ವೆಚ್ಚದ ಈ ಚಿತ್ರಕ್ಕೆ ಕೃಷ್ಣ ಆ್ಯಕ್ಷನ್ ಕಟ್ ಹೇಳಿದ್ದು ಹಾಸ್ಯನಟ ಚಿಕ್ಕಣ್ಣ, ಖಳನಟ ರವಿಶಂಕರ್ ಅಭಿನಯಿಸಿದ್ದಾರೆ
ದಾವಣಗೆರೆ ಹೈಸ್ಕೂಲ್ ಮೈದಾನದಲ್ಲಿ ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ ಹೆಬ್ಬುಲಿ ಚಿತ್ರದ ಧ್ವನಿಸುರಳಿ ಬಿಡುಗಡೆ ಮಾಡಲಾಯ್ತು. ಕೋಟಿಗೊಬ್ಬ 2 ಚಿತ್ರದ ನಂತರ ಸುದೀಪ್ ಹೊಸ ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಅಂದಾಜು 25 ಕೋಟಿ ವೆಚ್ಚದ ಈ ಚಿತ್ರಕ್ಕೆ ಕೃಷ್ಣ ಆ್ಯಕ್ಷನ್ ಕಟ್ ಹೇಳಿದ್ದು ಹಾಸ್ಯನಟ ಚಿಕ್ಕಣ್ಣ, ಖಳನಟ ರವಿಶಂಕರ್ ಅಭಿನಯಿಸಿದ್ದಾರೆ. ಈ ಸಮಾರಂಭದಲ್ಲಿ ನಟ ಸುದೀಪ್ ಕೂಡ ಕೊಂಚ ಬೇಸರಗೊಂಡಿದ್ದರು.ಕಾರಣ ಇಷ್ಟೆ ಚಿತ್ರದ ಹಾಡುಗಳು ಬಿಡುಗಡೆಗೆ ಮುನ್ನವೇ ಲೀಕ್ ಆಗಿತ್ತು. ಇದಕ್ಕೆ ಬೇಸರ ವ್ಯಕ್ತಪಡಿಸಿದ ಕಿಚ್ಚ ಚಿತ್ರದ ಹಾಡುಗಳನ್ನು ಲೀಕ್ ಮಾಡಿದ ಪುಣ್ಯಾತ್ಮನು ಒಂದಿಷ್ಟು ಕಾಸು ಮಾಡಿಕೊಳ್ಳಲಿ ಎಂದರು.
