ಜಾತಿ ಪ್ರಮಾಣ ಪತ್ರಕ್ಕಾಗಿ ಸಲ್ಲಿಸಿದ್ದ ಅರ್ಜಿಯಲ್ಲಿ ಕಿಚ್ಚ ಸುದೀಪ್ ಭಾವಚಿತ್ರ ಕಂಡುಬಂದಿದೆ. 

ವಿಜಯಪುರ (ಜ.03): ಜಾತಿ ಪ್ರಮಾಣ ಪತ್ರಕ್ಕಾಗಿ ಸಲ್ಲಿಸಿದ್ದ ಅರ್ಜಿಯಲ್ಲಿ ಕಿಚ್ಚ ಸುದೀಪ್ ಭಾವಚಿತ್ರ ಕಂಡುಬಂದಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮುದ್ದೇಬಿಹಾಳ ತಾಲೂಕಿನ ನಾಲತವಾಡ ಉಪ ತಹಶೀಲ್ದಾರ ಕಚೇರಿಗೆ ಬಂದಿದ್ದ ಅರ್ಜಿಯಲ್ಲಿ ಕಿಚ್ಚ ಸುದೀಪ್ ಭಾವಚಿತ್ರ ಇರುವ ಅರ್ಜಿ ಪತ್ತೆಯಾಗಿದ್ದು ತಹಶೀಲ್ದಾರ ಬಸವರಾಜ ಭದ್ರಣ್ಣ ದಂಗಾಗಿದ್ದಾರೆ. ನಾಲತವಾಡ ಹೋಬಳಿಯ ವಿರೇಶನಗರ ನಿವಾಸಿ ಸಿದ್ದಲಿಂಗಪ್ಪ ಕೊಳೂರ ಹೆಸರಲ್ಲಿ ಅರ್ಜಿ ಬಂದಿದ್ದು ಫೋಟೋ ಮಾತ್ರ ನಟ ಸುದೀಪ್​ ಅವರದ್ದಾಗಿದೆ. ಇದು ಕಿಡಿಗೇಡಿಗಳ ಕೃತ್ಯನಾ ಅಥವಾ ಉದ್ದೇಶ ಪೂರ್ವಕವಾಗಿ ಕಿಡಿಗೇಡಿ ಕೆಲಸಾನಾ ಅನ್ನೋ ಸಂಶಯ ಮೂಡಿದೆ.