ಇದೂವರೆಗೆ ಭಾರತದ ರಾಕೆಟ್ಟುಗಳು 2,300 ಕಿಲೋಕ್ಕಿಂತ ಹೆಚ್ಚು ತೂಕವನ್ನು ಹೊರುವ ಸಾಮರ್ಥ್ಯ ಹೊಂದಿರಲಿಲ್ಲ. 2,300ಕ್ಕಿಂತ ಹೆಚ್ಚು ತೂಕದ ಉಪಗ್ರಹಗಳ ಉಡಾವಣೆ ಮಾಡಲು ಅಮೆರಿಕದಂಥ ದೇಶಗಳಿಗೆ ದೊಡ್ಡ ಮೊತ್ತದ ಬೆಲೆ ತೆತ್ತು ನೆರವು ಪಡೆದುಕೊಳ್ಳಬೇಕಾಗುತ್ತಿತ್ತು. ಈಗ, ಈ ಹೊಸ ರಾಕೆಟ್'ನಿಂದ 4 ಸಾವಿರ ಕಿಲೋವರೆಗೂ ತೂಕವನ್ನು ನಭಕ್ಕೆ ನಾವು ಸಾಗಿಸಬಲ್ಲೆವು. ದೇಶಕ್ಕೆ ಸಾಕಷ್ಟು ಹಣದ ಉಳಿತಾಯವಾಗುತ್ತದೆ. ಬೇರೆ ರಾಷ್ಟ್ರಗಳ ತೂಕದ ಉಪಗ್ರಹಗಳನ್ನು ಉಡಾವಣೆ ಮಾಡಿ ನಾವು ಕಾಸನ್ನೂ ಸಂಪಾದಿಸಿಕೊಳ್ಳಬಹುದು.​

ಬೆಂಗಳೂರು(ಜೂನ್ 05): ದಿನದಿಂದ ದಿನಕ್ಕೆ ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ವಿಶ್ವದಲ್ಲಿ ಖ್ಯಾತಿ ಹೆಚ್ಚಿಸಿಕೊಳ್ಳುತ್ತಿರುವ ಇಸ್ರೋ ಇನ್ನೊಂದು ಮಹತ್ವದ ಸಾಧನೆ ಮಾಡಿದೆ. ಭಾರೀ ತೂಕದ ಉಪಗ್ರಹವನ್ನು ಹೊತ್ತ ದೇಶೀಯ ನಿರ್ಮಾಣದ ಅತೀ ತೂಕದ ರಾಕೆಟ್'ನ್ನು ನಭಕ್ಕೆ ಕಳುಹಿಸಿದೆ. ಈ ಜಿಎಸ್'ಎಲ್'ವಿ ಎಂಕೆ-3 ರಾಕೆಟ್ಟು ಮತ್ತು ಜಿಸ್ಯಾಟ್-19 ಉಪಗ್ರಹ ಇವೆರಡರ ವಿಶೇಷತೆಗಳೇನು? ಇಲ್ಲಿದೆ ಪಟ್ಟಿ.

ಜಿಎಸ್'ಎಲ್'ವಿ ರಾಕೆಟ್ ವಿಶೇಷತೆಗಳು
* ಎತ್ತರ: 43 ಮೀಟರ್ (140 ಅಡಿ)
* ಇದು ದೇಶೀಯವಾಗಿ ನಿರ್ಮಾಣವಾದ ಅತ್ಯಂತ ಶಕ್ತಿಶಾಲಿ ರಾಕೆಟ್ ಆಗಿದೆ.
* ಇದರ ತೂಕ 640 ಟನ್; ಪೂರ್ಣಪ್ರಮಾಣದಲ್ಲಿ ಬೆಳೆದ ಬರೋಬ್ಬರಿ 200 ಏಷ್ಯನ್ ಆನೆಗಳಿಗೆ ಇದು ಸಮ; ಬೋಯಿಂಗ್ ವಿಮಾನವನ್ನು ಹತ್ತಿರದಿಂದ ನೀವು ನೀಡಿದ್ದರೆ, ಅಂಥ 5 ದೈತ್ಯ ವಿಮಾನಗಳ ತೂಕ ಈ ರಾಕೆಟ್'ನದ್ದು.
* ಈ ರಾಕೆಟ್'ನ ವಿನ್ಯಾಸ ಮತ್ತು ನಿರ್ಮಾಣಕ್ಕೆ 15 ವರ್ಷ ತಗುಲಿದೆ. 300 ಕೋಟಿ ರೂಪಾಯಿ ವೆಚ್ಚವಾಗಿದೆ.
* ಜಿಎಸ್'ಎಲ್'ವಿ ಎಂಕೆ-3 ಡಿ1 ರಾಕೆಟ್ಟು ಕೆಳ ಭೂಕಕ್ಷೆಗೆ 10 ಸಾವಿರ ತೂಕವನ್ನು ಹೊತ್ತೊಯ್ಯಬಲ್ಲುದು. ಜಿಯೋಸಿಂಕ್ರೋನಸ್ ಟ್ರಾನ್ಸ್'ಫರ್ ಕಕ್ಷೆ(ಜಿಟಿಓ)ಗೆ 4 ಸಾವಿರ ಕಿಲೋ ತೂಕವನ್ನು ಸಾಗಿಸಬಲ್ಲುದು.
* ಇದೂವರೆಗೆ ಭಾರತದ ರಾಕೆಟ್ಟುಗಳು 2,300 ಕಿಲೋಕ್ಕಿಂತ ಹೆಚ್ಚು ತೂಕವನ್ನು ಹೊರುವ ಸಾಮರ್ಥ್ಯ ಹೊಂದಿರಲಿಲ್ಲ. 2,300ಕ್ಕಿಂತ ಹೆಚ್ಚು ತೂಕದ ಉಪಗ್ರಹಗಳ ಉಡಾವಣೆ ಮಾಡಲು ಅಮೆರಿಕದಂಥ ದೇಶಗಳಿಗೆ ದೊಡ್ಡ ಮೊತ್ತದ ಬೆಲೆ ತೆತ್ತು ನೆರವು ಪಡೆದುಕೊಳ್ಳಬೇಕಾಗುತ್ತಿತ್ತು. ಈಗ, ಈ ಹೊಸ ರಾಕೆಟ್'ನಿಂದ 4 ಸಾವಿರ ಕಿಲೋವರೆಗೂ ತೂಕವನ್ನು ನಭಕ್ಕೆ ನಾವು ಸಾಗಿಸಬಲ್ಲೆವು. ದೇಶಕ್ಕೆ ಸಾಕಷ್ಟು ಹಣದ ಉಳಿತಾಯವಾಗುತ್ತದೆ. ಬೇರೆ ರಾಷ್ಟ್ರಗಳ ತೂಕದ ಉಪಗ್ರಹಗಳನ್ನು ಉಡಾವಣೆ ಮಾಡಿ ನಾವು ಕಾಸನ್ನೂ ಸಂಪಾದಿಸಿಕೊಳ್ಳಬಹುದು.
* ಕೆಲವು ವರ್ಷಗಳ ಬಳಿಕ ಈ ರಾಕೆಟ್'ನ ಸಹಾಯದಿಂದ ಮನುಷ್ಯರನ್ನು ನಭಕ್ಕೆ ಕಳುಹಿಸಲು ಸಾಧ್ಯ.
* ಇಂಥ ಸಾಮರ್ಥ್ಯದ ರಾಕೆಟ್ ಹೊಂದಿರುವ ದೇಶಗಳೆಂದರೆ ಅಮೆರಿಕ, ಚೀನಾ, ಯೂರೋಪ್, ಜಪಾನ್ ಮತ್ತು ರಷ್ಯಾ ಮಾತ್ರ. ಇವುಗಳ ಸಾಲಿಗೆ ಭಾರತ ಸೇರ್ಪಡೆಯಾಗಿದೆ.
* ಜಗತ್ತಿನ ಅತ್ಯಂತ ಪವರ್'ಫುಲ್ ರಾಕೆಟ್ ಅಮೆರಿಕದ ಸ್ಯಾಟರ್ನ್-5 ಆಗಿದೆ. ಜಿಎಸ್'ಎಲ್'ವಿ ಮಾರ್ಕ್-3 ಉಪಗ್ರಹ 10 ಸಾವಿರ ಕಿಲೋ ತೂಕ ಹೊರಬಲ್ಲುದಾಗಿದ್ದರೆ, ಅಮೆರಿಕದ ಸ್ಯಾಟರ್ನ್-5 ರಾಕೆಟ್ಟು 1.4 ಲಕ್ಷ ಕಿಲೋ ತೂಕವನ್ನು ಹೊತ್ತೊಯ್ಯಬಲ್ಲುದು.

ಜಿಸ್ಯಾಟ್-19 ಉಪಗ್ರಹ ವೈಶಿಷ್ಟ್ಯ:
* ಈ ಸಂವಹನ ಉಪಗ್ರಹ ಬರೋಬ್ಬರಿ 3,136 ಕಿಲೋ ತೂಕವಿದೆ. ಭಾರತದಲ್ಲಿ ತಯಾರಾದ ಅತ್ಯಂತ ತೂಕದ ಉಪಗ್ರಹ ಇದಾಗಿದೆ.
* ಈ ಉಪಗ್ರಹಕ್ಕೆ ಲಿಥಿಯನ್-ಅಯಾನ್ ಬ್ಯಾಟರಿಯ ಶಕ್ತಿ ತುಂಬಲಾಗಿದೆ
* ಜಿಸ್ಯಾಟ್-19 ಉಪಗ್ರಹದಲ್ಲಿ ಮುಖ್ಯವಾಗಿರುವುದು Ka/Ku ಬ್ಯಾಂಡ್ ಟ್ರಾನ್ಸ್'ಪಾಂಡರ್'ಗಳು. ಜೊತೆಗೆ ಸೆಟಿಲೈಟ್'ಗಳು ಹಾಗೂ ಅವುಗಳ ಎಲೆಕ್ಟ್ರಾನಿಕ್ ಕಾಂಪೊನೆಂಟ್'ಗಳ ಮೇಲೆ ಆಗಸದ ವಿಕಿರಣದ ಪ್ರಭಾವವನ್ನು ಅಧ್ಯಯನ ಮಾಡಲು ಜಿಯೋಸ್ಟೇಷನರಿ ರೇಡಿಯೇಶನ್ ಸ್ಪೆಕ್ಟ್ರೋಮೀಟರ್ ಅನ್ನೂ ಈ ಉಪಗ್ರಹದಲ್ಲಿ ಅಳವಡಿಸಲಾಗಿದೆ. ಜೊತೆಗೆ, ಫೈಬರ್ ಆಪ್ಟಿಕ್ ಗೈರೋ, ಮೈಕ್ರೋ ಎಲೆಕ್ಟ್ರೋ ಮೆಕ್ಯಾನಿಕಲ್ ಸಿಸ್ಟಮ್ಸ್ ಆಕ್ಸೆಲರೋಮೀಟರ್ ಮೊದಲಾದ ಅತ್ಯಾಧುನಿಕ ತಂತ್ರಜ್ಞಾನಗಳು ಈ ಉಪಗ್ರಹಕ್ಕೆ ಅಳವಡಿಸಲಾಗಿದೆ.