Asianet Suvarna News Asianet Suvarna News

ನೇತಾಜಿ ಕೊಂದಿದ್ದು ಕ್ರೂರಿ ಸ್ಟಾಲಿನ್: ಸ್ವಾಮಿ ಬಿಚ್ಚಿಟ್ಟ ಸನ್ಸೇಶನ್!

ನೇತಾಜಿಯನ್ನು ಕೊಲೆ ರಹಸ್ಯ ಬಿಚ್ಚಿಟ್ಟ ಸುಬ್ರಮಣಿಯನ್ ಸ್ವಾಮಿ! ‘ನೇತಾಜಿ ಕೊಂದಿದ್ದು ರಷ್ಯಾ ಮಾಜಿ ಅಧ್ಯಕ್ಷ ಜೋಸೆಫ್ ಸ್ಟಾಲಿನ್’! ‘ವ್ಯವಸ್ಥಿತ ಸಂಚು ರೂಪಿಸಿ ನೇತಾಜಿ ಹತ್ಯೆಗೈದ ಸ್ಟಾಲಿನ್’! ನೇತಾಜಿ ವಿಮಾನ ಅಪಘಾತ ನೆಹರೂ ಕಟ್ಟು ಕತೆ ಎಂದ ಸ್ವಾಮಿ

Subramanian Swamy says Joseph Stalin killed Netaji Subhash Chandra Bose
Author
Bengaluru, First Published Sep 30, 2018, 11:51 AM IST

ಅಗರ್ತಲಾ(ಸೆ.30): ರಷ್ಯಾ ಮಾಜಿ ಅಧ್ಯಕ್ಷ ಜೋಸೆಫ್ ಸ್ಟಾಲಿನ್ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರನ್ನು ವ್ಯವಸ್ಥಿತವಾಗಿ ಕೊಲೆ ಮಾಡಿಸಿದ್ದ ಎಂದು ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ.

ಅಗರ್ತಲಾದಲ್ಲಿ ಸಂಸ್ಕೃತ್‌ ಗೌರವ ಸಂಘನೆ ಆಯೋಜಿಸಿದ್ದ ಸಮಾರಂಭವೊಂದರಲ್ಲಿ ಮಾತನಾಡಿದ ಸ್ವಾಮಿ, ನೇತಾಜಿ 1945ರ ವಿಮಾನ ದುರಂತದಲ್ಲಿ ಸಾವನ್ನಪ್ಪಿರಲಿಲ್ಲ ಬದಲಿಗೆ ಸ್ಟಾಲಿನ್ ವ್ಯವಸ್ಥಿತ ಸಂಚು ರೂಪಿಸಿ ನೇತಾಜಿ ಅವರನ್ನು ಹತ್ಯೆಗೈದಿದ್ದ ಎಂದು ಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.

ಬೋಸ್ 1945 ರಲ್ಲಿ ಸಂಭವಿಸಿದ್ದ ವಿಮಾನ ಅಪಘಾತದಲ್ಲಿ ಮೃತರಾಗಲಿಲ್ಲ.ಅವರು ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ ಎನ್ನುವುದು ಸುಳ್ಳು. ಈ ವಾದವನ್ನು ನೆಹರೂ ಮತ್ತು ಜಪಾನಿಯರು ಹುಟ್ಟು ಹಾಕಿದ್ದಾರೆ. ಸುಭಾಷ್ ಚಂದ್ರ ಬೋಸ್ ರಷ್ಯಾದಲ್ಲಿ ಆಶ್ರಯ ಬಯಸಿದ್ದರು. ಕಮ್ಯೂನಿಸ್ಟ್ ರಷ್ಯಾದಲ್ಲಿ ಬೋಸ್ ಇದ್ದದ್ದು ನೆಹರೂ ಅವರಿಗೆ ಸಹ ತಿಳಿದಿತ್ತು ಎಂದು ಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.

75 ವರ್ಷಗಳ ಹಿಂದೆಯೇ ಸಿಂಗಾಪುರದಲ್ಲಿ ರೂಪುಗೊಂಡ ನೇತಾಜಿ ಸುಭಾಷ್ ಚಂದ್ರ ಬೋಸ್ ಆಜಾದ್ ಹಿಂದ್ ಸರ್ಕಾರದ ಕಾರಣ ಬ್ರಿಟಿಷ್ ವಸಾಹತುಶಾಹಿ ಆಡಳಿತಗಾರರು ಭಾರತಕ್ಕೆ ಸ್ವಾತಂತ್ರ್ಯ ನೀಡಿದರು.  ಬ್ರಿಟಿಷ್ ಪ್ರಧಾನಮಂತ್ರಿ ಕ್ಲೆಮೆಂಟ್ ಆಟ್ಲೆ 1948 ರಲ್ಲಿ ಭಾರತಕ್ಕೆ ಭೇಟಿ ನೀಡಿದಾಗ, ಭಾರತೀಯರೇನಾದರೂ ಶಸ್ತ್ರಾಸ್ತ್ರ ಹಿಡಿದು ಬ್ರಿಟೀಷರ ವಿರುದ್ಧ ಹೋರಾಡಿದರೆ ಬ್ರಿಟೀಷರಿಗೆ ಮಾರಕವಾಗಲಿದೆ ಎಂದು ಹೇಳಿದ್ದನ್ನು ಸ್ವಾಮಿ ನೆನಪಿಸಿದರು.

Follow Us:
Download App:
  • android
  • ios