ಬೀದರ್(ನ.13): ಕಂಠಪೂರ್ತಿ ಸರಾಯಿ ಕುಡಿದು ಶಾಲೆಗೆ ಬಂದು ಗಲಾಟೆ ಮಾಡುತ್ತಿದ್ದ ಸರ್ಕಾರಿ ಶಾಲೆಯ ಶಿಕ್ಷಕನನ್ನು ವಿದ್ಯಾರ್ಥಿಗಳೇ ಪಾಠ ಕಲಿಸಿದ್ದಾರೆ.

ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಇಲ್ಲಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಗುರು ರಾಮಚಂದ್ರ ನಿನ್ನೆ ಬೆಳಿಗ್ಗೆ ಸರಾಯಿ ಕುಡಿದು ಶಾಲೆಯಲ್ಲಿ ಪ್ರಾರ್ಥನೆಗೆ ನಿಂತು ಗಲಾಟೆ ಮಾಡುತ್ತಿದ್ದರು. ನಿತ್ಯವೂ ಶಾಲೆಗೆ ಬರುವಾಗ ಸ್ವಲ್ಪ ಕುಡಿದು ಬರುತ್ತಿದ್ದ ಈ ರಾಮಚಂದ್ರ ಮಾಸ್ಟರ್ ನಿನ್ನೆ ಫುಲ್ ಟೈಟ್ ಆಗಿ ಬಂದಿದ್ದಾನೆ. ಇದನ್ನು ವಿದ್ಯಾರ್ಥಿಗಳು ಪೋಷಕರ ಗಮನಕ್ಕೆ ತಂದಿದ್ದಾರೆ. ಗ್ರಾಮಸ್ಥರು ಈ ಡ್ರಿಂಕ್ ಮಾಸ್ಟರ್​​ನ'ನ್ನು ಶಾಲೆಯಲ್ಲೇ ಕೂಡಿ ಹಾಕಿ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ.

200ಕ್ಕೂ ಅಧಿಕ ಮಕ್ಕಳು ವ್ಯಾಸಂಗ ಮಾಡುವ ಈ ಶಾಲೆಯಲ್ಲಿ ಕಳೆದ 6 ವರ್ಷಗಳಿಂದ ಈ ಕುಡುಕ ಶಿಕ್ಷಕನ ಅಟ್ಟಹಾಸದಿಂದ ಶೈಕ್ಷಣಿಕ ವಾತಾವರಣ ಹದಗೆಟ್ಟಿದ್ದು ತಕ್ಷಣ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.