ನಂಜನಗೂಡು ತಾಲೂಕಿನ ಸಿಂಗಾರಿ ಪುರದ ಸರ್ಕಾರಿ ಶಾಲೆಯಲ್ಲಿ ಮಂಗಳವಾರ ದಲಿತ ಮಹಿಳೆ ಅಡುಗೆ ಮಾಡಿದ್ದಾರೆ ಎಂಬ ಕಾರಣಕ್ಕೆ ವಿದ್ಯಾರ್ಥಿಗಳು ಬಿಸಿಯೂಟ ಬಹಿಷ್ಕರಿಸಿದ್ದರು. ಹಿಂದುಳಿದ ವರ್ಗಕ್ಕೆ ಸೇರಿದ ಮಹಿಳೆ ರಜೆ ಹಾಕಿದ್ದರಿಂದ ಸಹಾಯಕಿಯಾಗಿರುವ ದಲಿತ ಮಹಿಳೆ ಮಂಗಳವಾರ ಬಿಸಿಯೂಟ ತಯಾರಿಸಿದ್ದರು. ಆದರೆ ವಿದ್ಯಾರ್ಥಿಗಳು ಊಟ ಮಾಡದೇ ಬಹಿಷ್ಕರಿಸಿದ್ದರು.
ನಂಜನಗೂಡು: ದಲಿತ ಮಹಿಳೆ ಅಡುಗೆ ಮಾಡಿದ ಕಾರಣಕ್ಕೆ ಶಾಲಾ ವಿದ್ಯಾರ್ಥಿಗಳು ಬಿಸಿಯೂಟ ಬಹಿಷ್ಕರಿಸಿದ್ದ ಘಟನೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಮೈಸೂರಿನಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ನಂಜನಗೂಡು ತಾಲೂಕಿನ ಸಿಂಗಾರಿ ಪುರದ ಸರ್ಕಾರಿ ಶಾಲೆಯಲ್ಲಿ ಮಂಗಳವಾರ ದಲಿತ ಮಹಿಳೆ ಅಡುಗೆ ಮಾಡಿದ್ದಾರೆ ಎಂಬ ಕಾರಣಕ್ಕೆ ವಿದ್ಯಾರ್ಥಿಗಳು ಬಿಸಿಯೂಟ ಬಹಿಷ್ಕರಿಸಿದ್ದರು.
ಹಿಂದುಳಿದ ವರ್ಗಕ್ಕೆ ಸೇರಿದ ಮಹಿಳೆ ರಜೆ ಹಾಕಿದ್ದರಿಂದ ಸಹಾಯಕಿಯಾಗಿರುವ ದಲಿತ ಮಹಿಳೆ ಮಂಗಳವಾರ ಬಿಸಿಯೂಟ ತಯಾರಿಸಿದ್ದರು. ಆದರೆ ವಿದ್ಯಾರ್ಥಿಗಳು ಊಟ ಮಾಡದೇ ಬಹಿಷ್ಕರಿಸಿದ್ದರು.
ವಿಷಯ ತಿಳಿದು ಬುಧವಾರ ಶಾಲೆಗೆ ಭೇಟಿ ನೀಡಿದ ಅಧಿಕಾರಿಗಳು ಹಿಂದುಳಿದ ವರ್ಗದ ಮಹಿಳೆಯನ್ನು ಶಾಲೆಗೆ ಕರೆಸಿದರು. ಅಲ್ಲದೇ ಆಕೆಯಿಂದಲೇ ಬಿಸಿಯೂಟ ತಯಾರಿಸಿ, ವಿದ್ಯಾರ್ಥಿಗಳಿಗೆ ಬಡಿಸಿ, ತಾವೂ ಕೂಡ ಭೋಜನ ಸ್ವೀಕರಿಸಿ, ಸಮಸ್ಯೆ ಬಗೆಹರಿಸಿದರು.
