ಬಳ್ಳಾರಿಯ ಮೋಕಾ ಗ್ರಾಮದಲ್ಲಿರುವ ಪ್ರಥಮ ದರ್ಜೆ ಕಾಲೇಜಿನ ಪ್ರಿನ್ಸಿಪಾಲ್ ಪ್ರಕಾಶ್ ಚೌಧರಿ ನಮಗೆ ಬೇಡವೇ ಬೇಡವೆಂದು ಪಟ್ಟು ಹಿಡಿದಿರುವ ವಿದ್ಯಾರ್ಥಿಗಳು ದೂರು ನೀಡಿದ್ದಾರೆ. ಬೇಕಾದರೆ ಕಾಲೇಜಿಗೆ ಬೀಗ ಹಾಕಿ ಆದರೆ ವಿನಾಕಾರಣ ಕಿರುಕುಳ, ದಬ್ಬಾಳಿಕೆ ಕೊಡುವ ಪ್ರಿನ್ಸಿಪಾಲ್ ಮಾತ್ರ ಬೇಡ, ಈ ಹಿಂದೆಯೂ ಇದೇ ಕಾರಣಕ್ಕೆ ಶಿಕ್ಷಣ ಇಲಾಖೆ ಪ್ರಿನ್ಸಿಪಾಲ್ ಚೌಧರಿ ಅವರನ್ನು ಅಮಾನತು ಮಾಡಲಾಗಿತ್ತು. ಆದರೆ ಪ್ರಾಂಶುಪಾಲರು ನ್ಯಾಯಾಲಯದ ಮೊರೆ ಹೋಗಿ ಅಮಾನತು ಆದೇಶಕ್ಕೆ ತಡೆ ತಂದು ಕಳೆದೆರಡು ತಿಂಗಳಿನಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಈಗ ಮತ್ತದೇ ಕೆಲಸ ಮಾಡುತ್ತಿದ್ದಾರೆ ಕೂಡಲೇ ಅವರನ್ನು ವಾಪಾಸ್ ಕಳುಹಿಸಿ, ಇಲ್ಲವೇ ಅಮಾನತು ಮಾಡಿ ಎಂದು ವಿದ್ಯಾರ್ಥಿನಿಯರು ಒತ್ತಾಯಿಸಿ ಸ್ಥಳಕ್ಕಾಮಿಸಿದ ಡಿಡಿಪಿಯು ಅವರಿಗೆ ವಿದ್ಯಾರ್ಥಿಗಳೆಲ್ಲ ದೂರು ನೀಡಿದ್ದಾರೆ.
ಬಳ್ಳಾರಿ(ನ.26): ವಿದ್ಯೆ ಕಲಿಸುವ ಗುರು ದೇವರಿಗೆ ಸಮ ಎನ್ನುತ್ತಾರೆ ಆದರೆ ಈ ಕಾಲೇಜಿನ ವಿದ್ಯಾರ್ಥಿಗಳ ಪಾಲಿಗೆ ಪ್ರಾಂಶುಪಾಲರೇ ವಿಲನ್ ಆಗಿದ್ದಾರೆ.
ಬಳ್ಳಾರಿಯ ಮೋಕಾ ಗ್ರಾಮದಲ್ಲಿರುವ ಪ್ರಥಮ ದರ್ಜೆ ಕಾಲೇಜಿನ ಪ್ರಿನ್ಸಿಪಾಲ್ ಪ್ರಕಾಶ್ ಚೌಧರಿ ನಮಗೆ ಬೇಡವೇ ಬೇಡವೆಂದು ಪಟ್ಟು ಹಿಡಿದಿರುವ ವಿದ್ಯಾರ್ಥಿಗಳು ದೂರು ನೀಡಿದ್ದಾರೆ. ಬೇಕಾದರೆ ಕಾಲೇಜಿಗೆ ಬೀಗ ಹಾಕಿ ಆದರೆ ವಿನಾಕಾರಣ ಕಿರುಕುಳ, ದಬ್ಬಾಳಿಕೆ ಕೊಡುವ ಪ್ರಿನ್ಸಿಪಾಲ್ ಮಾತ್ರ ಬೇಡ, ಈ ಹಿಂದೆಯೂ ಇದೇ ಕಾರಣಕ್ಕೆ ಶಿಕ್ಷಣ ಇಲಾಖೆ ಪ್ರಿನ್ಸಿಪಾಲ್ ಚೌಧರಿ ಅವರನ್ನು ಅಮಾನತು ಮಾಡಲಾಗಿತ್ತು. ಆದರೆ ಪ್ರಾಂಶುಪಾಲರು ನ್ಯಾಯಾಲಯದ ಮೊರೆ ಹೋಗಿ ಅಮಾನತು ಆದೇಶಕ್ಕೆ ತಡೆ ತಂದು ಕಳೆದೆರಡು ತಿಂಗಳಿನಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಈಗ ಮತ್ತದೇ ಕೆಲಸ ಮಾಡುತ್ತಿದ್ದಾರೆ ಕೂಡಲೇ ಅವರನ್ನು ವಾಪಾಸ್ ಕಳುಹಿಸಿ, ಇಲ್ಲವೇ ಅಮಾನತು ಮಾಡಿ ಎಂದು ವಿದ್ಯಾರ್ಥಿನಿಯರು ಒತ್ತಾಯಿಸಿ ಸ್ಥಳಕ್ಕಾಮಿಸಿದ ಡಿಡಿಪಿಯು ಅವರಿಗೆ ವಿದ್ಯಾರ್ಥಿಗಳೆಲ್ಲ ದೂರು ನೀಡಿದ್ದಾರೆ.
ಕಾಲೇಜಿನ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಸೇರಿದಂತೆ ಕಾಲೇಜಿನ ಉಪನ್ಯಾಸಕರಿಗೂ ವಿನಾಕಾರಣ ಕಿರುಕುಳ ಕೊಡುತ್ತಿದ್ದಾರೆ ಎಂಬ ಆರೋಪವಿದೆ. ಈ ಬಗ್ಗೆ ಪ್ರಿನ್ಸಿಪಾಲ್ ಚೌಧರಿ 'ಸರಕಾರಿ ಆದೇಶದ ಮೇಲೆ ನಾನು ಕಾಲೇಜು ನಿಭಾಯಿಸುತ್ತಿದ್ದೇನೆ, ಯಾವುದೇ ಕಾರಣಕ್ಕೆ ವೈಯಕ್ತಿಕವಾಗಿ ವಿದ್ಯಾರ್ಥಿಗಳಿಗೆ ತೊಂದರೆ ಮಾಡಿಲ್ಲ, ರಾಜಕೀಯ ಮಾಡುತ್ತಿದ್ದಾರೆ ಎಂದು ಹೇಳುತ್ತಿದ್ದಾರೆ ಎಂದು ಹೇಳಿ ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ.