ಸಾರಿಗೆ ಬಸ್ ಕಂಡಕ್ಟರ್ ವಿದ್ಯಾರ್ಥಿಯೊಬ್ಬನಿಗೆ ಪಾಸ್ ತೋರಿಸುವಂತೆ ಹೇಳಿದ್ದಾರೆ. ಇದರಿಂದ ಕುಪಿತಗೊಂಡ ವಿದ್ಯಾರ್ಥಿ ಕಂಡಕ್ಟರ್ ಜೊತೆ ವಾಗ್ವಾದಕ್ಕೆ ಇಳಿದಿದ್ದಾನೆ. ಮಾತಿನ ಚಕಮಕಿ ನಡೆದು ಕೈಕೈ ಮಿಲಾಯಿಸಿ ಮಾರಾಮಾರಿಯೇ ನಡೆದಿದೆ. ಘಟನೆಯಲ್ಲಿ ನಿರ್ವಾಹಕ ಮಧುಸೂಧನ್ ಬಲ ಕೈ ಮುರಿದಿದ್ದು, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸ್ಥಳಕ್ಕೆ ಬಂದ ನಗರ ಠಾಣೆ ಪೊಲೀಸರು ಹಲ್ಲೆ ನಡೆಸಿದ ವಿದ್ಯಾರ್ಥಿ ರವೀಂದ್ರನನ್ನು ವಶಕ್ಕೆ ಪಡೆದು ವಿದ್ಯಾರ್ಥಿ ಗುಂಪನ್ನು ಚದುರಿಸಿದರು.
ಕೋಲಾರ(ಅ.14): ಬಸ್ ಪಾಸ್ ವಿಚಾರಕ್ಕೆ ಸಂಬಂಧಿಸಿದಂತೆ ಕಂಡಕ್ಟರ್ ಹಾಗೂ ವಿದ್ಯಾರ್ಥಿ ಮಧ್ಯೆ ಮಾರಾಮಾರಿ ನಡೆದ ಘಟನೆ ಕೋಲಾರದಲ್ಲಿ ನಡೆದಿದೆ.
ಸಾರಿಗೆ ಬಸ್ ಕಂಡಕ್ಟರ್ ವಿದ್ಯಾರ್ಥಿಯೊಬ್ಬನಿಗೆ ಪಾಸ್ ತೋರಿಸುವಂತೆ ಹೇಳಿದ್ದಾರೆ. ಇದರಿಂದ ಕುಪಿತಗೊಂಡ ವಿದ್ಯಾರ್ಥಿ ಕಂಡಕ್ಟರ್ ಜೊತೆ ವಾಗ್ವಾದಕ್ಕೆ ಇಳಿದಿದ್ದಾನೆ. ಮಾತಿನ ಚಕಮಕಿ ನಡೆದು ಕೈಕೈ ಮಿಲಾಯಿಸಿ ಮಾರಾಮಾರಿಯೇ ನಡೆದಿದೆ.
ಘಟನೆಯಲ್ಲಿ ನಿರ್ವಾಹಕ ಮಧುಸೂಧನ್ ಬಲ ಕೈ ಮುರಿದಿದ್ದು, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸ್ಥಳಕ್ಕೆ ಬಂದ ನಗರ ಠಾಣೆ ಪೊಲೀಸರು ಹಲ್ಲೆ ನಡೆಸಿದ ವಿದ್ಯಾರ್ಥಿ ರವೀಂದ್ರನನ್ನು ವಶಕ್ಕೆ ಪಡೆದು ವಿದ್ಯಾರ್ಥಿ ಗುಂಪನ್ನು ಚದುರಿಸಿದರು.
ಕೋಲಾರದಿಂದ ಸಿ ಭೈರೆಗೌಡ ಇಂಜನಿಯರ್ ಕಾಲೇಜಿಗೆ ಸಾರಿಗೆ ಬಸ್ ಹೋಗಬೇಕಿತ್ತು. ಈ ಬಸ್'ಗೆ ಚಾಲಕ ಕಂ ನಿರ್ವಾಹಕ ಒಬ್ಬರೇ ಆಗಿದ್ದು, ಬಸ್ ಪಾಸ್ ಚೆಕ್ ಮಾಡುವಾಗ ವಿಳಂಬ ಆಗಿದೆ. ಇದರಿಂದ ಗಲಾಟೆ ನಡೆದಿದೆ ಅಂತ ಹೇಳಲಾಗ್ತಿದೆ. ಇನ್ನು ಈ ಗಲಾಟೆಯಿಂದ ನಗರದ ಸುತ್ತಮುತ್ತ ಟ್ರಾಫಿಕ್ ಜಾಮ್ ಆಗಿದ್ದು, ಬೇರೆ ವಾಹನಗಳು ಹಾಗೂ ಜನರಿಗೆ ತೊಂದರೆಯಾಗಿದೆ.
