ಅಶ್ಲೀಲ ವೆಬ್ ಸೈಟ್'ಗೆ ಮೈಸೂರು ವಿಶ್ವವಿದ್ಯಾಲಯದ ವಿದ್ಯಾರ್ಥಿ ಫೋಟೋ ಅಪ್'ಲೋಡ್ ಪ್ರಕರಣ ಈಗ ಹೊಸ ತಿರುವು ಪಡೆದುಕೊಂಡಿದೆ.
ಮೈಸೂರು(ಎ.28): ಅಶ್ಲೀಲ ವೆಬ್ ಸೈಟ್'ಗೆ ಮೈಸೂರು ವಿಶ್ವವಿದ್ಯಾಲಯದ ವಿದ್ಯಾರ್ಥಿ ಫೋಟೋ ಅಪ್'ಲೋಡ್ ಪ್ರಕರಣ ಈಗ ಹೊಸ ತಿರುವು ಪಡೆದುಕೊಂಡಿದೆ.
ಸಹಪಾಠಿಗಳ ಹಿಯಾಳಿಕೆಯ ಹಿನ್ನೆಲೆಯಲ್ಲಿ ವಿದ್ಯಾರ್ಥಿಯೇ ಫೋಟೋ ಅಪ್'ಲೋಡ್ ಗೆ ಕಾರಣ ಎಂಬ ವಿಚಾರ ಬೆಳಕಿಗೆ ಬಂದಿದೆ. ವಿವಿಯ ಪರಿಸರ ಅಧ್ಯಯನ ವಿಭಾಗದ ವಿದ್ಯಾರ್ಥಿ ಜಯಕುಮಾರ್ ಎಂಬಾತ ಪೋಟೋ ಅಪ್ಲೋಡ್ ಮಾಡಿದ್ದು, ಆತನನ್ನು ಸೈಬರ್ ಕ್ರೈಂ ಪೋಲೀಸರು ಬಂಧಿಸಿ ವಿಚಾರಣೆ ಮುಂದುವರೆಸಿದ್ದಾರೆ.
ರ್ಯಾಂಕ್ ವಿಚಾರದಲ್ಲಿ ಸಹಪಾಠಿಗಳಿಂದ ಮನನೊಂದು ಜಯಕುಮಾರ್ ಫೋಟೋ ಅಪ್ ಲೋಡ್ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.
