ಆತ ಸಾವಿರಾರು ಕನಸು ಕಂಡು ಬೆಂಗಳೂರಿಗೆ ಆಗಮಿಸಿದ್ದನು. ಆತನ ಕನಸಿನಂತೆ ಎಂಜಿಯರ್​ ಕಾಲೇಜಿನಲ್ಲಿ ಕೊನೆಯ ಸೆಮಿಸ್ಟರ್'​​ನಲ್ಲಿ ಅಭ್ಯಾಸ ಮಾಡುತ್ತಿದ್ದನು. ತಾಯಿ ಅನಾರೋಗ್ಯ ಕಾರಣದಿಂದ ಹಲವು ದಿನಗಳು ಕಾಲೇಜಿಗೆ ಹೋಗಿರಲಿಲ್ಲ. ಆದ್ರೂ ಅಭ್ಯಾಸ ಮಾಡಿ ಕಾಲೇಜಿಗೆ ಪರೀಕ್ಷೆ ಬರೆಯಲು ಹೋಗಿದ್ದನು. ಆದರೆ ಕಾಲೇಜಿನ ದುರಾಡಳಿತದಿಂದ ಆತ ಪ್ರಾಣವೇ ಬಿಟ್ಟಿದ್ದಾನೆ. ಏಕೆ ಅಂತೀರಾ ಈ ವರದಿ ನೋಡಿ.

ಬೆಂಗಳೂರು(ಜೂ.28): ಆತ ಸಾವಿರಾರು ಕನಸು ಕಂಡು ಬೆಂಗಳೂರಿಗೆ ಆಗಮಿಸಿದ್ದನು. ಆತನ ಕನಸಿನಂತೆ ಎಂಜಿಯರ್​ ಕಾಲೇಜಿನಲ್ಲಿ ಕೊನೆಯ ಸೆಮಿಸ್ಟರ್'​​ನಲ್ಲಿ ಅಭ್ಯಾಸ ಮಾಡುತ್ತಿದ್ದನು. ತಾಯಿ ಅನಾರೋಗ್ಯ ಕಾರಣದಿಂದ ಹಲವು ದಿನಗಳು ಕಾಲೇಜಿಗೆ ಹೋಗಿರಲಿಲ್ಲ. ಆದ್ರೂ ಅಭ್ಯಾಸ ಮಾಡಿ ಕಾಲೇಜಿಗೆ ಪರೀಕ್ಷೆ ಬರೆಯಲು ಹೋಗಿದ್ದನು. ಆದರೆ ಕಾಲೇಜಿನ ದುರಾಡಳಿತದಿಂದ ಆತ ಪ್ರಾಣವೇ ಬಿಟ್ಟಿದ್ದಾನೆ. ಏಕೆ ಅಂತೀರಾ ಈ ವರದಿ ನೋಡಿ.

ಬಳ್ಳಾರಿ ಮೂಲದ ಲೋಕೇಶ್​​ ವೈಟ್‌ಫೀಲ್ಡ್‌ ಸಮೀಪದ ಎಂವಿಜೆ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಏರೋನಾಟಿಕ್ಸ್‌ ವಿಭಾಗದ ಅಂತಿಮ ವರ್ಷದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ. ತಂದೆ-ತಾಯಿಗೆ ಒಬ್ಬನೇ ಮಗನಾಗಿದ್ದು, ತಾಯಿ ಅನಾರೋಗ್ಯ ಅಂತ ಬಳ್ಳಾರಿಗೆ ಹೋಗಿದ್ದನು. ಹಲವು ದಿನಗಳ ಕಾಲ ಕಾಲೇಜಿಗೆ ಹೋಗಿರಲಿಲ್ಲ. ಕಾಲೇಜಿನ ದುರಾಡಳಿತ ಖಂಡಿಸಿ ವಿದ್ಯಾರ್ಥಿಗಳು ಪ್ರತಿಭಟನೆ ಕೂಡ ಮಾಡಿದ್ರು. ಆದ್ರೂ ಕಾಲೇಜಿನ ಆಡಳಿತ ಮಂಡಳಿ ವಿದ್ಯಾರ್ಥಿಗಳಿಗೆ ಹಾಲ್​ ಟಿಕೆಟ್​ ನೀಡಲು ನಿರಾಕರಿಸಿತ್ತು.

ನಿನ್ನೆ ಕಾಲೇಜಿಗೆ ಹೋಗಿದ್ದ ಲೋಕೇಶ್​​'ಗೆ ಕಾಲೇಜಿನ ಆಡಳಿತ ಮಂಡಳಿ ಹಾಲ್​ ಟಿಕೆಟ್​​ ನೀಡಲು ನಿರಾಕರಿಸಿತ್ತು. ಇದರಿಂದಾಗಿ ಮನನೊಂದ ಲೋಕೇಶ್​​ ತಾನು ಇರುವ ಎಆರ್​ಕೆ ಅರ್ಪಾಟಮೆಂಟ್​ನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಇನ್ನು ಲೋಕೇಶ್​​ ಆತ್ಮಹತ್ಯೆಗೆ ಶರಣಾಗಿರುವ ವಿಚಾರ ತಿಳಿದ ಲೋಕೇಶ್​ ಸ್ನೇಹಿತರು ಐಟಿಪಿಎಲ್​ನಲ್ಲಿರುವ ನಾರಾಯಣ ಹೃದಯಾಲಕ್ಕೆ ಲೋಕೇಶ್​​ನನ್ನು ದಾಖಲು ಮಾಡಿದ್ರು. ಆದ್ರೆ ಅಷ್ಟರಲ್ಲಿ ಲೋಕೇಶ್​ ಪ್ರಾಣ ಪಕ್ಷಿ ಹಾರಿಹೋಗಿತ್ತು. ವಿಷಯ ತಿಳಿದು ಬಳ್ಳಾರಿಯಿಂದ ಬೆಂಗಳೂರಿಗೆ ಬಂದ ಲೋಕೇಶ್​ ತಂದೆ- ತಾಯಿ ಆಕ್ರಂದನ ಮುಗಿಮುಟ್ಟಿದೆ.

ಒಟ್ಟಿನಲ್ಲಿ ಸಾವಿರಾರು ಕನಸು ಕಟ್ಟಿಕೊಂಡ ಬೆಂಗಳೂರಿಗೆ ಎಂಜಿಯರ್​​ ಅಭ್ಯಾಸ ಮಾಡಲು ಬಂದ ವಿದ್ಯಾರ್ಥಿಯೊಬ್ಬ ಕಾಲೇಜಿನ ಆಡಳಿತ ಮಂಡಳಿ ಅಂಧಾಕಾನೂನಿಗೆ ಬಲಿಯಾಗಿದ್ದಾನೆ.