ಮುಂದಿನ ಚುನಾವಣೆಯಲ್ಲಿ ಪ್ರತಾಪ್ ಸಿಂಹ ವಿರುದ್ಧ ಪ್ರಬಲ ಸ್ಪರ್ಧಿ

ಸಂಸದ ಪ್ರತಾಪ್ ಸಿಂಹ ವಿರುದ್ಧ 2019ರಲ್ಲಿ ಮೈಸೂರಿನಲ್ಲಿ ಸ್ಪರ್ಧಿಸಲು ಕಾಂಗ್ರೆಸ್ ಟಿಕೆಟ್‌ಗಾಗಿ ದೆಹಲಿಯಲ್ಲಿ ಪೈಪೋಟಿ ನಡೆಯುತ್ತಿದ್ದು, ಸೂರಜ್ ಹೆಗ್ಡೆ ಮತ್ತು ಬೃಜೇಶ್ ಕಾಳಪ್ಪ ಮೈಸೂರು

ಟಿಕೆಟ್‌ಗಾಗಿ ಈಗಿನಿಂದಲೇ ಪ್ರಯತ್ನಶೀಲರಾಗಿದ್ದಾರೆ. ರಾಹುಲ್ ಆಪ್ತನಾಗಿರುವ ಸೂರಜ್ ಹೆಗ್ಡೆಗೆ, ತಾನು ದೇವರಾಜ್ ಅರಸು ಅವರ ಮೊಮ್ಮಗ ಎನ್ನುವುದು ಪ್ಲಸ್ ಪಾಯಿಂಟ್. ಇನ್ನು ಬೃಜೇಶ್ ದಿನವೂ ಟೀವಿ ಚರ್ಚೆಗಳಲ್ಲಿ ಕಾಣಿಸಿಕೊಂಡು ಸುದ್ದಿಯಲ್ಲಿರುತ್ತಾರೆ. ಅಷ್ಟೇ ಅಲ್ಲ ಕಪಿಲ್ ಸಿಬಲ್‌ಗೆ ಆತ್ಮೀಯರೂ ಹೌದು.

(ಪ್ರಶಾಂತ್ ನಾಥು ಅವರ ಇಂಡಿಯಾ ಗೇಟ್ ಅಂಕಣದ ಆಯ್ದ ಭಾಗ-ಕನ್ನಡಪ್ರಭ)